ನವದೆಹಲಿ : ಭಾರತದ ವಿರುದ್ಧ ಲಸಿಕಾ ಸಮರ ಸಾರಿದ್ದ ಇಂಗ್ಲೆಂಡ್ ಗೆ ಭಾರತ ಸರಿಯಾಗಿ ತಿರುಗೇಟು ಕೊಟ್ಟಿದೆ. ಭಾರತದ ಎಚ್ಚರಿಕೆಗೆ ಬಾಗಿದಂತೆ ನಟಿಸಿದ್ದ ಬ್ರಿಟಿಷರಿಗೆ ಸರಿಯಾಗಿಯೇ ಪಾಠ ಕಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯರಿಗೆ 10 ದಿನಗಳ ಕಾಲ ಕ್ವಾರಂಟೈನ್ ವಿಧಿಸಿದ ಕಾರಣಕ್ಕೆ ತಿರುಗೇಟು ಅನ್ನುವಂತೆ ಇಂಗ್ಲೆಂಡ್ನಿಂದ ಭಾರತಕ್ಕೆ ಆಗಮಿಸುವವರಿಗೂ 10 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಿ ಭಾರತ ಆದೇಶ ಹೊರಡಿಸಿದೆ.
Covishield ಹಾಗೂ Covaxin ಪಡೆದ ಭಾರತೀಯರು ಇಂಗ್ಲೆಂಡ್ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯ ಎಂದು ಈ ಹಿಂದೆ ಬ್ರಿಟನ್ ಹೇಳಿತ್ತು. ಇದಕ್ಕೆ ಭಾರತದಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ನಾಟಕವಾಡಿದ ಇಂಗ್ಲೆಂಡ್ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡಿತ್ತು, ಹಾಗಂತ ಕ್ವಾರಂಟೈನ್ ನಿಯಮವನ್ನು ಮುಂದುವರಿಸಿತ್ತು.
ಕೋವಿಶೀಲ್ಡ್ ಲಸಿಕೆ ಬ್ರಿಟನ್ನಲ್ಲಿ ಅಸ್ಟ್ರಾಜೆನಿಕಾ ಲಸಿಕೆ ಎಂಬ ಹೆಸರಿನಲ್ಲಿ ನೀಡಲಾಗುತ್ತಿದೆ. ಹಾಗಿದ್ದರೂ ಬ್ರಿಟನ್ ನ ಮೊಂಡು ವಾದ ಭಾರತ ಇದೀಗ ತೀವ್ರವಾಗಿ ತಿರುಗೇಟು ಕೊಟ್ಟಿದ್ದು,ಇಂಗ್ಲೆಂಡ್ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಅಕ್ಟೋಬರ್ 4ರಿಂದ ಹೊಸ ನಿಯಮ ಅನ್ವಯವಾಗಲಿದ್ದು ಇಂಗ್ಲೆಂಡ್ನಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ RTPCR ಪರೀಕ್ಷೆಯ ನೆಗೆಟಿವ್ ರಿಪೋರ್ಟ್ ಕಡ್ಡಾಯ, ಭಾರತದ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ RTPCR ಪರೀಕ್ಷೆಗೆ ಒಳಪಡಬೇಕು. ನಂತರ 10 ದಿನಗಳ ಕಾಲ ಕ್ವಾರಂಟೈನ್ ಗೆ ಒಳಗಾಗಗಬೇಕು.
ಇದೀಗ ಭಾರತದ ಹೊಸ ಮಾರ್ಗಸೂಚಿ ಇಂಗ್ಲೆಂಡ್ ಗೆ ತಲೆನೋವಾಗಿ ಪರಿಣಮಿಸಲಿದೆ. ಇದೀಗ ಭಾರತೀಯರಿಗೆ ವಿಧಿಸಿರುವ ಕ್ವಾರಂಟೈನ್ ನಿಯಮದಿಂದ ಹಿಂದೆ ಸರಿಯದೆ ವಿಧಿಯಿಲ್ಲ. ಈ ಇಂಗ್ಲೆಂಡ್ ಗೆ ಭಾರತವನ್ನು ಹಿಂದೊಮ್ಮೆ ನಾವು ಆಳಿದ್ದೇವೆ ಅನ್ನುವ ಆಹಂಕಾರ. ಹಿಂದಿನಂತೆ ಈಗ್ಲೂ ಭಾರತೀಯರು ಜೀತದಾಳುಗಳಾಗಬೇಕು ಅನ್ನುವುದು ಅದರ ಮನೋಭಾವನೆ. ಮೊನ್ನೆ ಮೊನ್ನೆ ಬ್ರಿಟನ್ ಪಾರ್ಲಿಮೆಂಟ್ ನಲ್ಲಿ ಕಾಶ್ಮೀರದ ವಿಚಾರದ ಬಗ್ಗೆ ಅಲ್ಲಿನ ಕಮ್ಯೂನಿಸ್ಟ್ ಪಕ್ಷದ ನಾಯಕರು ಚರ್ಚೆ ನಡೆಸಿದ್ದರು.
In A Reciprocal Move, India Makes 10-Day Quarantine, RT-PCR Test Mandatory For UK Travellers | Check Guidelines – British nationals arriving in India, irrespective of their vaccination status, will have to undergo 10 days of mandatory quarantine from October 4 as part of the reciprocal actions initiated by the government following the vaccine certification row between the two countries
Discussion about this post