Monday, April 19, 2021

ರಿಯಲ್ ಮದುವೆಯನ್ನು ಮೀರಿಸುವಂತೆ ನಡೆಯಿತು ರೀಲ್ ಮದುವೆ…

Must read

- Advertisement -
- Advertisement -

ಕನ್ನಡ ಕಿರುತೆರೆಯಲ್ಲಿ ಹಲವು ಪ್ರಥಮಗಳನ್ನು ಸಾಧಿಸಿರುವ ಕನ್ನಡದ ನಂಬರ್ ಒನ್ ಮನರಂಜನಾ ಚಾನೆಲ್ ಆಗಿರುವ ಜೀ ಕನ್ನಡ ಇದೀಗ ವೀಕ್ಷಕರ ಮಧ್ಯದಲ್ಲೇ ವಿವಾಹದ ಆರತಕ್ಷತೆ, ಭೂರಿ ಭೋಜನ ಆಯೋಜಿಸಿ ಮತ್ತೊಂದು ಪ್ರಥಮಕ್ಕೆ ನಾಂದಿ ಹಾಡಿದೆ.

ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಆರತಕ್ಷತೆಯನ್ನು ಜನರ ಮಧ್ಯದಲ್ಲಿ ಆಯೋಜಿಸಿದ ಖ್ಯಾತಿಗೆ ನಿಮ್ಮ ನೆಚ್ಚಿನ ಕಿರುತೆರೆ ವಾಹಿನಿ ಜೀ ಕನ್ನಡ ಭಾಜನವಾಗಿದೆ.

ನಾಗಿಣಿ-2 ಖ್ಯಾತಿ ತ್ರಿಶೂಲ್ ಮತ್ತು ಶಿವಾನಿ ಅವರುಗಳ ವಿವಾಹದ ಆರತಕ್ಷತೆಯನ್ನು ಮಂಡ್ಯ ಜಿಲ್ಲೆಯಲ್ಲಿ ಒಂದು ಸ್ಪರ್ಧೆಯ ಮೂಲಕ ಆಯೋಜಿಸಿತು. ಈ ಕಾರ್ಯಕ್ರಮಕ್ಕೆ ಮನೆ ಮನೆಗೂ ಭೇಟಿ ನೀಡಿ ಜನರನ್ನು ಆಹ್ವಾನಿಸಿ ಒಂದು ಮಿಸ್ಡ್ ಕಾಲ್ ಮೂಲಕ ಅವರನ್ನು ಆಯ್ಕೆ ಮಾಡಿಕೊಂಡು ಮಂಡ್ಯದ ಒಂದು ಮದುವೆ ಛತ್ರದಲ್ಲಿ ಎಲ್ಲರನ್ನೂ ಆಹ್ವಾನಿಸಿ ಅದರಲ್ಲಿ ಇಡೀ ನಾಗಿಣಿ ತಂಡ ಭಾಗವಹಿಸುವಂತೆ ಮಾಡಿ ಅದರಲ್ಲಿ ಒಂದು ಸಂವಾದವನ್ನೂ ಆಯೋಜಿಸಿತ್ತು.

ಮಂಡ್ಯ ಜಿಲ್ಲೆಯ ಜನರು ಈ ಕಾರ್ಯಕ್ರಮವನ್ನು ತಮ್ಮದೇ ಕುಟುಂಬದ ಕಾರ್ಯಕ್ರಮದಂತೆ ಸಂಭ್ರಮದಲ್ಲಿ ಭಾಗವಹಿಸಿದರು. ನಾಗಿಣಿ-2 ತಂಡದೊಂದಿಗೆ ಸೆಲ್ಫೀಗಳನ್ನು ತೆಗೆದುಕೊಂಡು ಸಂಭ್ರಮಿಸಿದರು. ಪ್ರತಿಯೊಬ್ಬರೂ ಧಾರಾವಾಹಿ ಕುರಿತಾದ ತಮ್ಮ ಕುತೂಹಲವನ್ನು ತಂಡದೊಂದಿಗೆ ಸಂವಾದದಲ್ಲಿ ಪರಿಹರಿಸಿಕೊಂಡರು.

ಎಲ್ಲರಿಗೂ ತಂಡದೊಂದಿಗೆ, ವಿವಾಹಿತ ಜೋಡಿಯೊಂದಿಗೆ ಸೆಲ್ಫೀ ತೆಗೆದುಕೊಳ್ಳುವ ಅವಕಾಶ, ಬಾಳೆಲೆಯಲ್ಲಿ ಶ್ಯಾವಿಗೆ ಪಾಯಸದ ಭರ್ಜರಿ ಭೋಜನ ಆಯೋಜಿಸಿ ವೀಕ್ಷಕರನ್ನು ಸತ್ಕರಿಸಿ ಕಳುಹಿಸಲಾಗಿದೆ.

- Advertisement -
- Advertisement -
- Advertisement -

Latest article