ಮೈಸೂರು : ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಬಹುಮತ ಇಲ್ಲದಿದ್ದರೂ ಜೆಡಿಎಸ್ ಗೆದ್ದುಕೊಂಡಿದೆ.
ಜೆಡಿಎಸ್ ನ ರುಕ್ಮಿಣಿ ಮೈಸೂರು ಮಹಾನಗರಪಾಲಿಕೆಯ ಮೇಯರ್ ಆಗಿ ಆಯ್ಕೆಯಾದರೆ, ಕಾಂಗ್ರೆಸ್ ಉಪಮೇಯರ್ ಪಟ್ಟವನ್ನು ಗೆದ್ದುಕೊಂಡಿದೆ.
ಈ ನಡುವೆ ಪತ್ನಿ ರುಕ್ಮಿಣಿ ಮೈಸೂರು ಮಹಾನಗರಪಾಲಿಕೆಯ ಮೇಯರ್ ಆದ ಖುಷಿ ತಡೆಯಲಾಗದೆ ಅವರ ಪತಿ ಮಾದೇಗೌಡ ಸಭಾಂಗಣದಲ್ಲೇ ಪತ್ನಿಗೆ ಮುತ್ತಿಕ್ಕಿದ್ದಾರೆ.
ಅಷ್ಟೇ ಅಲ್ಲದೆ ಬಯಸದೇ ಸಿಕ್ಕ ಭಾಗ್ಯದ ಸಂಭ್ರಮದಲ್ಲಿ ಹೆಂಡತಿಯನ್ನು ಎತ್ತಿ ಸಂಭ್ರಮಿಸಿದ್ದಾರೆ. ಮುಂಭಾಗದಲ್ಲಿದ್ದ ಫೋಟೋಗ್ರಾಫರ್ ಗಳು ಒಂದ್ಸಲ ಇಳಿಸಿ ಸಾರ್ ಅನ್ನೋ ತನಕವೂ ಅವರು ಬಿಟ್ಟಿರಲಿಲ್ಲ.

ಇನ್ನು ಪಾಲಿಕೆಯ ಚುನಾವಣೆಯ ಸೋಲು ಗೆಲುವಿನ ಲೆಕ್ಕಚಾರ ಬೆಳಗ್ಗೆಯಿಂದಲೂ ಕ್ಷಣಕ್ಕೊಂದು ತಿರುವು ಪಡೆಯುತ್ತಿತ್ತು.
ಚುನಾವಣೆ ಹಿನ್ನಲೆಯಲ್ಲಿ ಮೈಸೂರಿನಲ್ಲೇ ಮೊಕ್ಕಾಂ ಹೂಡಿದ್ದ ಕುಮಾರಸ್ವಾಮಿ ಲಾಭ ನಷ್ಟದ ಲೆಕ್ಕಚಾರದಲ್ಲಿ ತೊಡಗಿದ್ದರು.

ಸಚಿವ ಎಸ್ ಟಿ ಸೋಮಶೇಖರ್ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ್ರೆ, ಕಾಂಗ್ರೆಸ್ ನ ತನ್ವೀರ್ ಸೇಠ್ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದ್ದರು.
ಆದರೆ ಕುಮಾರಸ್ವಾಮಿಗೆ ಹಳೆಯ ಮೈತ್ರಿ ಬೇಕಾಗಿರಲಿಲ್ಲ, ಬದಲಾಗಿ ಬಿಜೆಪಿಯಯನ್ನು ಬೆಂಬಲಿಸಲು ಬಯಸಿದ್ದರು.
ಕುಮಾರಸ್ವಾಮಿಯ ನಡೆ ಅರಿತು ಫೀಲ್ಡಿಗಿಳಿದ ಡಿಕೆ ಶಿವಕುಮಾರ್ ನೇರವಾಗಿ ದೇವೇಗೌಡರನ್ನು ಸಂಪರ್ಕಿಸಿದ್ದಾರೆ.
ಈ ವೇಳೆ ಕೇರಳ ಚುನಾವಣೆಯ ಲೆಕ್ಕಚಾರ ಮಾಡಿದ ದೇವೇಗೌಡರು, ಬಿಜೆಪಿಯನ್ನು ಬೆಂಬಲಿಸಿದರೆ ಕೇರಳದಲ್ಲಿ ದೊಡ್ಡ ಪೆಟ್ಟು ತಿನ್ನಬೇಕಾಗುತ್ತದೆ ಎಂದು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದಾರೆ.
ಅಲ್ಲಿಗೆ ಬಯಸದೇ ಬಂದ ಭಾಗ್ಯ ಅನ್ನುವಂತೆ ಜೆಡಿಎಸ್ ಮೇಯರ್ ಪಟ್ಟವನ್ನು ಅಲಂಕರಿಸಿದೆ.
Discussion about this post