Saturday, February 27, 2021

ಮೈಸೂರು ಮಹಾರಾಜ ಕಾಲೇಜಿನಲ್ಲಿ ಕುಸಿದ ಮೇಲ್ಛಾವಣಿ – ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Must read

ಮೈಸೂರು : ನಗರದ ಮೈಸೂರು ಮಹಾರಾಜ ಕಾಲೇಜಿನ ಮೇಲ್ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ವಿದ್ಯಾರ್ಥಿಗಳ ಮೇಲೆ ಮೇಲ್ಛಾವಣಿ ಕುಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದ್ವೀತಿಯ ವರ್ಷದ ಪದವಿ ತರಗತಿ ಆಂತರಿಕ ಪರೀಕ್ಷೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ವಿಶಾಲ್, ಯಶವಂತ್ ಮತ್ತು ಸಲೀಂ ಎಂದು ಗುರುತಿಸಲಾಗಿದೆ.

ಇದೇ ಕೊಠಡಿಯಲ್ಲಿ ಒಟ್ಟು 25 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು ಎಂದು ಗೊತ್ತಾಗಿದೆ.

ಇದೀಗ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ಕೈಗೊಂಡಿದ್ದಾರೆ.

ಏಕಾಏಕಿ ಮೇಲ್ಛಾವಣೆ ಕುಸಿದು ಬಿದ್ದಿರುವುದರಿಂದ ಇದೀಗ ಕಾಲೇಜಿನ ಉಳಿದ ತರಗತಿಗಳ ಸುರಕ್ಷತೆ ಬಗ್ಗೆಯೂ ಅನುಮಾನವೆದ್ದಿದೆ.

- Advertisement -
- Advertisement -

Latest article