ಅವ್ಯಾಹತ ಮಳೆಯಿಂದಾಗಿ ಹಳಿಗಳ ಮೇಲೆ ನೀರು ತುಂಬಿಕೊಂಡು ಮುಂಬೈ-ಕೋಲ್ಹಾಪುರ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಚಲಿಸಲು ಸಾಧ್ಯವಾಗದೆ ಬದ್ಲಾಪುರ್ ಮತ್ತು ವಾಂಘಾನಿ ನಡುವೆ ಸಿಲುಕಿ ಹಾಕಿಕೊಂಡಿತ್ತು.
ರೈಲಿನಲ್ಲಿ 1050 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು ಇದೀಗ ಅವರೆಲ್ಲರನ್ನೂ ರಕ್ಷಿಸಲಾಗಿದೆ. ಇದರಲ್ಲಿ 9 ಗರ್ಭಿಣಿಯರು ಮತ್ತು 1 ತಿಂಗಳ ಒಂದು ಮಗು ಇತ್ತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ NDRF ಜೊತೆಗೆ ಭಾರತೀಯ ನೌಕಾದಳ, ವಾಯು ಪಡೆ, ಸೇನಾ ಪಡೆ ಹಾಗೂ ರೈಲ್ವೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಶುಕ್ರವಾರ ರಾತ್ರಿ ಮುಂಬೈ ರೈಲ್ವೆ ನಿಲ್ದಾಣದಿಂದ ಕೋಲ್ಹಾಪುರ ಕಡೆಗೆ ಹೊರಟಿದ್ದ ರೈಲು ವಾಂಘನಿ ತಲುಪುವಷ್ಟು ಹೊತ್ತಿಗೆ ರೈಲು ಹಳಿ ನೀರಿನಲ್ಲಿ ಮುಳುಗಿ ಹೋಗಿತ್ತು. ಹೀಗಾಗಿ ರೈಲು ಮುಂದಕ್ಕೆ ಸಂಚರಿಸಲು ಸಾಧ್ಯವಾಗಲಿಲ್ಲ. ಹೊತ್ತು ಕಳೆದಂತೆ ನೀರಿನ ಮಟ್ಟವೂ ಏರ ತೊಡಗಿತ್ತು.
ಬ್ರಾಂಡೆಡ್ ಬಟ್ಟೆಗಳ ಮೇಲೆ 50% ರಿಯಾಯತಿ
ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಯಾಣಿಕರ ರಕ್ಷಣಾ ಪಡೆ ಧಾವಿಸಿತು. ಇಂದು ಬೆಳಗ್ಗೆ 3 ಗಂಟೆಗೆ ಮುಂಬೈಯಿಂದ 100 ಕಿಲೋ ಮೀಟರ್ ದೂರದಲ್ಲಿ ಭಾರೀ ಮಳೆಗೆ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರನ್ನು ರಕ್ಷಿಸುವ ಸಲುವಾಗಿ ಪ್ರಾರಂಭಗೊಂಡ ಕಾರ್ಯಾಚರಣೆ ಕೆಲವೇ ಗಂಟೆಗಳಲ್ಲಿ ಮುಕ್ತಾಯಗೊಂಡಿತು.
ಫ್ಯಾಷನ್ ಪ್ರಿಯ ಮಹಿಳೆಯರಿಗಾಗಿ ಮಾತ್ರ…!
ತುರ್ತು ಸಂದರ್ಭದ ಸಲುವಾಗಿ ಭಾರತೀಯ ವಾಯು ಸೇನೆಯ ವಿಮಾನಗಳನ್ನು ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಜೊತೆಗೆ ಪ್ರಯಾಣಿಕರನ್ನು ಕರೆ ತರಲು ಹಲವಾರು ದೋಣಿಯ ವ್ಯವಸ್ಥೆಯನ್ನು ಕೂಡಾ ಮಾಡಲಾಗಿತ್ತು.
Discussion about this post