ಮುಂಬೈ : ಕೊರೋನಾ ಸೋಂಕಿನ ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. 3ನೇ ಅಲೆಯನ್ನು ಹೇಗಾದರೂ ತಡೆಯಬೇಕು, ತಡೆಯಲು ಅಸಾಧ್ಯವಾದರೆ ಅದರ ಪ್ರಭಾವವನ್ನಾದರೂ ತಗ್ಗಿಸಬೇಕು ಎಂದು ಶತ ಪ್ರಯತ್ನ ನಡೆಸುತ್ತಿದೆ.
ಈ ನಡುವೆ ಲಾಕ್ ಡೌನ್ ನಿಯಮಗಳನ್ನು ಜನ ಉಲ್ಲಂಘಿಸುತ್ತಿರುವುದು ತಲೆ ನೋವಿಗೆ ಕಾರಣವಾಗಿದೆ. ಹೋಗ್ಲಿ ಜನಸಾಮಾನ್ಯರಿವರು ಅನ್ನಬಹುದು. ಲಾಕ್ ಡೌನ್ ನಿಯಮ ಉಲ್ಲಂಘಿಸುವಲ್ಲಿ ಸೆಲೆಬ್ರೆಟಿಗಳೂ ಹಿಂದೆ ಬಿದ್ದಿಲ್ಲ. ಹಿಂದೆ ಕರ್ನಾಟಕದಲ್ಲೂ ಹೀಗೆ ಆಗಿತ್ತು, ಕೊರೋನಾ ಭಯವಿದ್ದರೂ ಸಿನಿಮಾ ತಾರೆಯರು ತಮ್ಮ ಸಿನಿಮಾ ಪ್ರಚಾರವನ್ನು ಭರ್ಜರಿಯಾಗಿ ನಡೆಸಿದರು. ಮಾಸ್ಕ್ ಹಾಕದೆ ಬೀದಿ ಸುತ್ತಿದ್ದರು.
ಇದೀಗ ದಿಶಾ ಮತ್ತು ಟೈಗರ್ ಜೋಡಿ ಜೂ.2 ರಂದು ಜಿಮ್ ಮುಗಿಸಿ ಮನೆಗೆ ನಡೆಯೋದು ಬಿಟ್ಟು ತಮ್ಮ ದುಬಾರಿ ಕಾರಿನಲ್ಲಿ ಮುಂಬೈ ಸುತ್ತಿದ್ದಾರೆ. ಬಾಂದ್ರಾದ ಬ್ಯಾಂಡ್ಸ್ಟ್ಯಾಂಡ್ ಬಳಿ ಪೊಲೀಸರು ಈ ಕಾರನ್ನು ತಡೆದಾಗ ಅಸಲಿ ಕಥೆ ಬಯಲಾಗಿದೆ. ಈ ವೇಳೆ ದಾಖಲೆ ಪತ್ರಗಳನ್ನು ಪರಿಶೀಲಿಸಿದ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಆದರೆ ಯಾವಾಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಯ್ತೋ ಪೊಲೀಸರ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಜನ ಸಾಮಾನ್ಯನೊಬ್ಬ ಹೀಗೆ ಮಾಡಿರುತ್ತಿದ್ರೆ ಪೊಲೀಸರು ಸುಮ್ಮನಿರುತ್ತಿದ್ರ ಕೇಸ್ ದಾಖಲಿಸಿ ವಾಹನ ಸೀಜ್ ಮಾಡುತ್ತಿರಲಿಲ್ಲವೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಇದೀಗ ಎಚ್ಚೆತ್ತುಕೊಂಡಿರುವ ಪೊಲೀಸರು ಜೋಡಿ ಹಕ್ಕಿ ವಿರುದ್ದ ಕೇಸ್ ದಾಖಲಿಸಿದ್ದು FIR ಕೂಡಾ ಮಾಡಿದ್ದಾರೆ.
Discussion about this post