ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಧೋನಿ ಪಿಚ್ ನಲ್ಲಿ ವೇಗವಾಗಿ ಓಡುವುದನ್ನು ಇಂದಿಗೂ ನೋಡುವ ಸೌಭಾಗ್ಯ ನಮ್ಮದು.
ಪಿಚ್ ನಲ್ಲಿ ಓಡುವ ಧೋನಿ ಇದೀಗ ಕುದುರೆ ಜೊತೆ ಓಡುವ ಮೂಲಕ ಸುದ್ದಿಯಲ್ಲಿದ್ದಾರೆ.ಹೇಳಿ ಕೇಳಿ ಕುದುರೆ ಗಾಳಿಯ ವೇಗಕ್ಕೆ ಮತ್ತೊಂದು ಹೆಸರು. ಅಂತಹ ಕುದುರೆ ಜೊತೆ ಧೋನಿ ರೇಸ್ ಗೆ ಇಳಿದಿದ್ದಾರೆ.
ಕೊರೋನಾ ಕಾರಣದಿಂದ 14ನೇ ಸೀಸನ್ ನ ಐಪಿಎಲ್ ಮುಂದೂಡಲ್ಪಟ್ಟಿದ್ದು, ರಾಂಚಿಯ ಫಾರ್ಮ್ ಹೌಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ. ಕುಟುಂಬ ಸದಸ್ಯರೂ ಕೂಡಾ ಧೋನಿ ಜೊತೆಗಿದ್ದಾರೆ.
ಫಾರ್ಮ್ ಹೌಸ್ ನಲ್ಲಿ ಒಂದಲ್ಲ ಒಂದು ಕೆಲಸದಲ್ಲಿ ನಿರತರಾಗಿರುವ ಧೋನಿ ಇದೀಗ ತಮ್ಮ ಶ್ವೇತ ವರ್ಣ ಕುದುರೆಯೊಂದಿಗೆ ರೇಸ್ ಗೆ ಇಳಿದಿದ್ದಾರೆ. ಪತಿಯ ಕುದುರೆ ಜೊತೆಗಿನ ರೇಸ್ ವಿಡಿಯೋ ವನ್ನು ಪತ್ನಿ ಸಾಕ್ಷಿ ಸಿಂಗ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Discussion about this post