ಸರ್ಕಾರಿ ಶಾಲೆಗಳನ್ನು ಉಳಿಸಿ ಅನ್ನುವುದು ಬರೀ ಕೂಗಾಯ್ತೇ ಮಧು ಬಂಗಾರಪ್ಪನವರೇ
ಶಿಕ್ಷಣ ಇಲಾಖೆ ಮತ್ತು ಸರ್ಕಾರದ ಇಚ್ಛಾ ಶಕ್ತಿಯ ಕೊರತೆಯ ಕಾರಣದಿಂದ ರಾಜ್ಯದಲ್ಲಿ ಪ್ರತೀ ವರ್ಷ ಒಂದಿಷ್ಟು ಸರ್ಕಾರಿ ಶಾಲೆಗಳು ಮುಚ್ಚುತ್ತಲೇ ಇದೆ. ದಾಖಲೆಗಳನ್ನು ತೆಗೆದು ನೋಡಿದ್ರೆ ಅದ್ಯಾವ ವರ್ಷ ಸರ್ಕಾರಿ ಶಾಲೆಗಳಿಗೆ ಶಾಶ್ವತ ಬೀಗ ಬಿದ್ದಿಲ್ಲ ಹೇಳಿ.
ಈ ಬಾರಿಯೂ 4 ಸಾವಿರಕ್ಕೂ ಅಧಿಕ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ. ಮುಂಗಾರು ಅಧಿವೇಶನದಲ್ಲಿ ಶಿಕ್ಷಣ ಇಲಾಖೆಯೇ ಮಂಡಿಸಿರುವ ಮಾಹಿತಿಯಲ್ಲಿ ಈ ವಿಷಯ ಬಯಲಾಗಿದೆ. ಗಮನಾರ್ಹ ಅಂಶ ಕಡಿಮೆ ವಿದ್ಯಾರ್ಥಿ ದಾಖಲಾತಿ ಹೊಂದದ ಒಂದೇ ಒಂದು ಜಿಲ್ಲೆಯಿಲ್ಲ.
20222ರಲ್ಲಿ ಶೂನ್ಯದಿಂದ 10 ಮಕ್ಕಳಿರುವ ಶಾಲೆಗಳ ಸಂಖ್ಯೆ 1800 ಇತ್ತು. 2023ರಲ್ಲಿ ಈ ಸಂಖ್ಯೆ 4398ಕ್ಕೆ ಏರಿಯಾಯ್ತು. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಏರಿಸುವ ನಿಟ್ಟಿನಲ್ಲಿ ಉಚಿತ ಪ್ರವೇಶ, ಉಚಿತ ಸಮವಸ್ತ್ರ, ಪುಸ್ತಕ, ಶೂ , ಬಿಸಿಯೂಟ, ಕ್ಷೀರ ಭಾಗ್ಯ, ಸೈಕಲ್ ಭಾಗ್ಯ ಗಳನ್ನು ನೀಡಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಬೇಕೆಂದು ಸರ್ಕಾರಿ ಶಾಲೆಗಳಲ್ಲಿ ದ್ವಿ ಭಾಷಾ ಮಾಧ್ಯಮವನ್ನು ಪ್ರಾರಂಭಿಸಲಾಗುತ್ತಿದೆ. ಆದರೆ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಬರುತ್ತಿಲ್ಲ.
ಇದನ್ನೂ ಓದಿ : ಯಾದಗಿರಿ PSI ಆಗಿದ್ದ ಪರಶುರಾಮ್ ನಿಧನ : ರಾತ್ರಿ ಹೃದಯಾಘಾತ
ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಿಂದ ಪೋಷಕರು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದ ತಮ್ಮ ಮಕ್ಕಳನ್ನು ಸ್ರಕಾರಿ ಶಾಲೆಗಳಿಗೆ ವರ್ಗಾಯಿಸಿದ್ದು. ಈ ಕಾರಣದಿಂದ 2020-21 ಮತ್ತು 2021-22ರಲ್ಲಿ ಸರ್ಕಾರಿ ಶಾಲಾ ದಾಖಲಾತಿ ಏರಿಕೆ ಕಂಡಿತ್ತು. ಯಾವಾಗ ಆರ್ಥಿಕ ಸ್ಥಿತಿ ಸುಧಾರಿಸಲಾರಂಭಿಸಿತೋ ಮತ್ತೆ ದಾಖಲಾತಿ ಕುಸಿಯಲಾರಂಭಿಸಿದೆ.
10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಪಕ್ಕದ ಶಾಲೆಗಳೊಂದಿಗೆ ವಿಲೀನ ಮಾಡುವ ಬಗ್ಗೆ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಈ ಮೂಲಕ ಒಂದು ಶಾಲೆಯನ್ನು ಸರ್ಕಾರ ಶಾಶ್ವತವಾಗಿ ಮುಚ್ಚುತ್ತಿತ್ತು. ಹೀಗಾಗಿಯೇ ಈ ಬಾರಿ 4397 ಶಾಲೆಗಳಿಗೆ ಮುಚ್ಚುವ ಭೀತಿ ಎದುರಾಗಿದೆ.
ಇದನ್ನೂ ಓದಿ : ವರ್ಗಾವಣೆ ದಿನವೇ ಹೃದಾಯಘಾತ : ವರ್ಗಾವಣೆ ದಂಧೆಗೆ ಬಲಿಯಾದ್ರ PSI ಪರಶುರಾಮ್
ಇಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿಲ್ಲ, 10ಕ್ಕಿಂತ ಮಕ್ಕಳಿರುವ ಶಾಲೆಗಳ ಸಂಖ್ಯೆ 4398 ಆದ್ರೆ, 11 ರಿಂದ 20 ಮಕ್ಕಳಿರುವ ಶಾಲೆಗಳ ಸಂಖ್ಯೆ 7810 ಮತ್ತು 21 ರಿಂದ 30 ಮಕ್ಕಳಿರುವ ಶಾಲೆಗಳ ಸಂಖ್ಯೆ 5362.
ಒಟ್ಟಿನಲ್ಲಿ ಹೀಗೆ ಪ್ರತೀ ವರ್ಷ ಶಾಲೆಗಳಿಗೆ ಬೀಗ ಜಡಿಯುತ್ತಾ ಹೋದ್ರೆ ಮುಂದೊಂದು ದಿನ ಸರ್ಕಾರಿ ಶಾಲೆಗಳೇ ಇರೋದಿಲ್ಲ ಅನ್ನೋದು ಸತ್ಯ. ಪ್ರಸ್ತುತ 46000 ಸಾವಿರ ಶಾಲೆಗಳು ರಾಜ್ಯದಲ್ಲಿ ಕಾರ್ಯಾಚರಿಸುತ್ತಿದೆ.
During 2023-24, the number schools with less than 10 students was 3,349, which increased to 4,398 during the 2024-25 academic year, according to data from the Department of School Education & Literacy.