ನಟಿ ದಿಯಾ ಮಿರ್ಜಾ ಫೆಬ್ರವರಿ 15 ರಂದು ಎರಡನೆ ವಿವಾಹವಾಗಿದ್ದರು. ದಿಯಾ ಫೆಬ್ರವರಿ 2021, 15ರಂದು ಉದ್ಯಮಿ ವೈಭವ್ ರೇಖಿ ಜೊತೆ ಮುಂಬೈನಲ್ಲಿ ಹಸೆಮಣೆ ಏರಿದ್ದರು. ದಿಯಾಗೆ ಇದು ಎರಡನೇ ಮದುವೆ. ಸರಳವಾಗಿ ನೆರವೇರಿದ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು.
ವಿವಾಹವಾದ ಕೆಲವೇ ದಿನಗಳ ಹನಿಮೂನ್ ಗೆ ತೆರಳಿದ್ದ ಅವರು ನಾನು ತಾಯಿಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಮದುವೆಯಾಗಿ ತಿಂಗಳು ಕಳೆದಿದೆಯಷ್ಟೇ, ಅಷ್ಟು ಹೊತ್ತಿಗೆ ಶುಭ ಸುದ್ದಿಯೇ ಎಂದು ನೆಟ್ಟಿಗರು ಹುಬ್ಬೇರಿಸಿದ್ದರು. ಮತ್ತೆ ಕೆಲವರು ದಿಯಾ ಹಾಕಿದ್ದ ಪೋಸ್ಟ್ಗೆ ವ್ಯಂಗ್ಯವಾಡಿದ್ದರು.
ದಿಯಾ ಪೋಸ್ಟ್ಗೆ ಕಮೆಂಟ್ ಮಾಡಿದ್ದ ವ್ಯಕ್ತಿಯೊಬ್ಬ ಗರ್ಭಿಣಿಯಾದ ಬಳಿಕ ಮದುವೆ ಆಗಿದ್ದೀರಿ. ಗರ್ಭಿಣಿಯಾಗಿರೋ ವಿಷಯ ಮುಂಚೆಯೇ ತಿಳಿಸಲಿಲ್ಲವ್ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ದಿಯಾ, ನಾನು ಗರ್ಭಿಣಿಯಾದೆ ಅನ್ನುವ ಕಾರಣಕ್ಕೆ ನಾವು ಮದುವೆಯಾಗಲಿಲ್ಲ. ಮದುವೆಯ ತಯಾರಿಯಲ್ಲಿದ್ದ ವೇಳೆ ನಾನು ಗರ್ಭಿಣಿಯಾಗಿರೋದು ಗೊತ್ತಾಯ್ತು.
ಮದುವಗೆ ಮುಂಚೆಯೇ ನಾವು ಪೋಷಕರಾಗುತ್ತಿದ್ದೇವೆ ಎಂದು ಹೇಳಬಹುದಿತ್ತು. ಆದರೆ ವೈದ್ಯಕೀಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ತಡವಾಗಿ ವಿಷಯವನ್ನು ಪ್ರಕಟಿಸಬೇಕಾಯ್ತು ಅಂದಿದ್ದಾರೆ.
ದಿಯಾ ಮಿರ್ಜಾ ವೈಭವ್ ಜೊತೆ ಮದುವೆಯಾಗುವ ಮೊದಲು ತಮ್ಮ ಬ್ಯುಸಿನೆಸ್ ಪಾರ್ಟನ್ ಆಗಿದ್ದ ಸಾಹಿಲ್ ಸಂಘಾ ಅವರನ್ನು ಮದುವೆಯಾಗಿದ್ದರು. ಆದರೆ 2019 ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರ ಆದರು. ಬಳಿಕ ದಿಯಾ ವೈಭವ್ ರೇಖಿಯನ್ನು ವರಿಸಿದ್ದಾರೆ.
Discussion about this post