ಕೊಚ್ಚಿ : ಮಲಯಾಳಂ ಚಿತ್ರರಂಗದ ಸೂಪರ್ ಮೋಹನ್ ಲಾಲ್ ಇಂದು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ಮೊದಲ ಡೋಸ್ ಪಡೆದಿರುವ ಅವರು ಕೊರೋನಾ ಲಸಿಕೆಯ ನಿಯಮಗಳಂತೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದ ಬಳಿಕ ಮರಳಿದ್ದಾರೆ.
ಇದೇ ವೇಳೆ ಲಸಿಕೆ ಪಡೆದ ಬಳಿಕ ಮಾತನಾಡಿದ ಮೋಹನ್ ಲಾಲ್, ಎಲ್ಲಾ ನಾಗರಿಕರು ಲಸಿಕೆ ಪಡೆಯುವಂತೆ ಮನವಿ ಮಾಡಿದರು. ನಮಗಾಗಿ ಮತ್ತು ಈ ಸಮಾಜಕ್ಕಾಗಿ ನಾವು ಲಸಿಕೆಯನ್ನು ಪಡೆಯಬೇಕು ಎಂದು ಕರೆ ಕೊಟ್ಟರು.
ಇದೀಗ ಮೋಹನ್ ಲಾಲ್ ಲಸಿಕೆ ಪಡೆಯಲು ಆಗಮಿಸಿದ ಮತ್ತು ಲಸಿಕೆ ಪಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Discussion about this post