ಮಿಂಟೋ ಆಸ್ಪತ್ರೆಯಲ್ಲಿ ಕರವೇ ಮಾಡಿದ ಹೋರಾಟ ಇದೀಗ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಕರವೇ ಮಹಿಳಾ ಘಟಕದ ನೇತೃತ್ವದಲ್ಲಿ ಬಂದ ಪುರುಷರು ಮಹಿಳಾ ವೈದ್ಯರ ಮೇಲೆ ಮಾತ್ರವಲ್ಲದೆ ಪುರುಷ ವೈದ್ಯರ ಮೇಲೂ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿದ್ದಾರೆ.
ರೋಗಿಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ಒಳ್ಳ ನುಗ್ಗಿ ದಾಂಧಲೆ ಮಾಡುವುದು ಯಾವ ನ್ಯಾಯ. 30 ಹೆಚ್ಚು ಜನ ಒಳ ನುಗ್ಗಿ ಕನ್ನಡ ಮಾತನಾಡಿ ಅಂದ್ರೆ ಹೊರ ರಾಜ್ಯದ ವೈದ್ಯ ವಿದ್ಯಾರ್ಥಿಗಳು ಏಕಾಏಕಿ ಕನ್ನಡ ಮಾತನಾಡಲು ಸಾಧ್ಯವೇ. ಹಾಗಂತ ಅವರಿಗೆ ಕನ್ನಡ ಬರೋದಿಲ್ಲ ಅನ್ನೋದು ಸುಳ್ಳು. ಇಲ್ಲಿರುವ ಎಲ್ಲರಿಗೂ ಕನ್ನಡ ಬರುತ್ತದೆ.
ನಾವು ನಾನ್ ಕನ್ನಡಿಗ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇವೆ. ಅವರ ಬಂದು ಪಾಠ ಮಾಡಲಿ ಎಂದು ಕನ್ನಡ ಹೋರಾಟಗಾರರಿಗೆ ಸವಾಲು ಹಾಕಿರುವ ವೈದ್ಯರು. ಇದು ಕರವೇ ವಿರುದ್ಧದ ಹೋರಾಟವಲ್ಲ. ವೈದ್ಯರ ಮೇಲೆ ಪದೇ ಪದೇ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಟ ಅಂದಿದ್ದಾರೆ.
Discussion about this post