ಗ್ಯಾರಂಟಿ ಯೋಜನೆಯ ಭಾಗವಾದ ಗೃಹ ಲಕ್ಷ್ಮಿ ವಿಚಾರದಲ್ಲಿ ಸರ್ಕಾರಕ್ಕೆ ಮುಜುಗರ
ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಸ್ಕೀಂ ನಿರೀಕ್ಷೆಯ ಲಾಭವನ್ನು ಕಾಂಗ್ರೆಸ್ ಗೆ ತಂದುಕೊಡಲಿಲ್ಲ. ಯೋದನೆ ಪ್ರಾರಂಭವಾದ ದಿನದಿಂದಲೇ ಹಲವು ಎಡವಟ್ಟು ಮಾಡಿಕೊಟ್ಟ ಕಾರಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೃಹಿಣಿಯರ ಆಕ್ರೋಶಕ್ಕೂ ತುತ್ತಾಗಿತ್ತು.
ಇಲಾಖೆಯ ಅಧಿಕಾರಿಗಳು ಒಡ್ಡುತ್ತಿದ್ದ ತಾಂತ್ರಿಕ ಸಮಸ್ಯೆಯ ನೆಪ ನಿಜಕ್ಕೂ ಹಾಸ್ಯಾಸ್ಪದವಾಗಿತ್ತು. ಐಟಿ ಸಿಟಿ ಎಂದು ಕರೆಸಿಕೊಂಡ ಬೆಂಗಳೂರಿನಲ್ಲೇ ಸಾಫ್ಟ್ ವೇರ್ ಸಮಸ್ಯೆ ಅಂದ್ರೆ ಜೋಕ್ಸ್ ತಾನೇ. ಹಾಗೋ ಹೀಗೋ ಒಂದಿಷ್ಟು ಕಂತುಗಳನ್ನು ಖಾತೆಗೆ ಹಾಕುವಲ್ಲಿ ಸರ್ಕಾರ ಯಶಸ್ವಿಯಾಯ್ತು.
ಇದೇ ಯೋಜನೆಗೆ ಸಿಕ್ಕ ಬೇಡಿಕೆಯನ್ನು ಗಮನಿಸಿದ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟುಗಳ ನಿರೀಕ್ಷೆಯಲ್ಲಿತ್ತು. ಆದರೆ ಜನ ಸಿದ್ದರಾಮಯ್ಯ ಸರ್ಕಾರದ ಕಾಸು ಇಸ್ಕೊಂಡು ಮೋದಿ ಪಕ್ಷಕ್ಕೆ ಓಟು ಹಾಕಿದ್ದರು. ಇದೇ ವೇಳೆ ಲೋಕಸಭೆ ನಂತ್ರ ಗೃಹಲಕ್ಷ್ಮಿ ಕಾಸು ಬರೋದು ಸಂಶಯ ಅನ್ನಲಾಗಿದ್ದು, ಅದೇ ಸತ್ಯ ಅನ್ನುವಂತೆ ಜೂನ್ ಮತ್ತು ಜುಲೈ ತಿಂಗಳ ಹಣ ಖಾತೆಗೆ ಬರ್ಲೇ ಇಲ್ಲ.
ಸೋಶಿಯಲ್ ಮೀಡಿಯಾಗಳಲ್ಲೂ ಕೂಡಾ ಗೃಹಲಕ್ಷ್ಮಿ ಯೋಜನೆ ಟ್ರೋಲ್ ಆಗಲಾರಂಭಿಸಿತು. ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ವರಮಹಾಲಕ್ಷ್ಮಿ ಹಬ್ಬದಷ್ಟು ಹೊತ್ತಿಗೆ ಬಾಕಿ ಉಳಿಸಿಕೊಂಡಿರುವ ಕಂತುಗಳನ್ನು ಖಾತೆಗೆ ಹಾಕೋದಾಗಿ ಹೇಳಿದೆ. ಹೀಗಾಗಿ ಆಷಾಢ ಸೇಲ್ ನಲ್ಲಿ ಬಟ್ಟೆ ಖರೀದಿಸಲು ನಿರ್ಧರಿಸಿದವರಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಈ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಂದಿನಿಂದ ಎಲ್ಲ ಫಲಾನುಭವಿಗಳ ಖಾತೆಗೂ ಹಣ ಜಮೆಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಾಂತ್ರಿಕ ದೋಷದಿಂದ ಕಳೆದ 2 ತಿಂಗಳಿಂದ ಹಣ ಬಂದಿಲ್ಲ. ಇಂದಿನಿಂದ ಎಲ್ಲ ಫಲಾನುಭವಿಗಳ ಖಾತೆಗೂ ಹಣ ಜಮೆಯಾಗಲಿದೆ, ಮಹಿಳೆಯರು ಚಿಂತಿಸುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ 2000 ಹಣ ನೀಡಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಯೋಜನೆಯಾಗಿದೆ. ಜೂನ್ ಮತ್ತು ಜುಲೈತಿಂಗಳ 2 ತಿಂಗಳ ಕಂತಿನ ಹಣವನ್ನು ಒಟ್ಟಿಗೆ ಇದೇ ಆಗಸ್ಟ್ ಮೊದಲ ವಾರದಲ್ಲಿ ಯಜಮಾನಿಯರ ಖಾತೆಗೆ ಜಮಾಗೊಳ್ಳಲಿದೆ.
ಇದೀಗ ಎಲ್ಲಾ ತಾಂತ್ರಿಕ ಸಮಸ್ಯೆಗಳು ಪರಿಹಾರಗೊಂಡಿದ್ದು, ಇನ್ಮುಂದೆ ಪ್ರತಿ ತಿಂಗಳ 15 ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆಯಂತೆ.