ಇತ್ತೀಚೆಗೆ ಕರ್ನಾಟಕದ ಪ್ರಖ್ಯಾತ ಸ್ವಾಮೀಜಿಯೊಬ್ಬರ ವಿಡಿಯೋ ಒಂದು ವೈರಲ್ ಆಗಿದ್ದು, ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಎಂದು ಮಾತೃಶ್ರೀ ಹಿಂದೂ ಜಾಗೃತಿ ಫೌಂಡೇಶನ್ ಸಂಸ್ಥಾಪಕ ಡಾ. ವಿನಯ್ ಗೌಡ ಜೀ ಆತಂಕ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಅಸಲಿಯೋ ನಕಲಿಯೋ ಎಂದು ಗೊತ್ತಾಗುವ ಮುಂಚೆಯೇ ಇಂತಹ ದೃಶ್ಯಗಳಿಂದ ಹಿಂದೂ ಧರ್ಮಕ್ಕೆ ಸಾಕಷ್ಟು ಹಾನಿಯಾಗಿರುತ್ತದೆ. ಹಿಂದು ಧರ್ಮವನ್ನು ನಿಂದಿಸುವ ಜೀವಿಗಳಿಗೆ ಇಂತಹ ವಿಡಿಯೋ ಆಹಾರವಾಗಿ ಬಿಡುತ್ತದೆ. ಹೀಗಾಗಿ ಖಾವಿಧಾರಿಗಳು ಹಾಗೂ ಧಾರ್ಮಿಕ ಗುರುಗಳು ಯಾವುದೇ ಕಾರಣಕ್ಕೆ ಇಂತಹ ಜಾಲಕ್ಕೆ ಸಿಲುಕಿಕೊಳ್ಳಬಾರದು ಎಂದು ಡಾ. ವಿನಯ್ ಗೌಡ ಮನವಿ ಮಾಡಿದ್ದಾರೆ.
ಸನ್ಯಾಸ್ವತ್ತ ಒಗ್ಗಿ ಬರುವುದಿಲ್ಲ ಅನ್ನುವ ಕಾರಣಕ್ಕೆ ಸಾಕಷ್ಟು ಮಂದಿ ಮಠಗಳನ್ನು ತೊರೆದು ಸಂಸಾರಿಗಳಾಗಿದ್ದಾರೆ. ಇದು ಸರಿಯಾದ ನಡೆ. ಅದನ್ನು ಬಿಟ್ಟು ಕದ್ದು ಮುಚ್ಚಿ ವ್ಯವಹಾರ ಮಾಡಿದರೆ ಸಮಾಜ ಇಡೀ ಧರ್ಮವನ್ನು ಕೆಟ್ಟದಾಗಿ ನೋಡುತ್ತದೆ. ಈಗಾಗಲೇ ಹಲವು ದಾಳಿಗೆ ತುತ್ತಾಗಿರುವ ಹಿಂದು ಧರ್ಮದಲ್ಲಿ ಮತ್ತಷ್ಟು ಒಡಕಿಗೆ ಕಾರಣವಾಗುತ್ತದೆ.
ಸನಾತವಾಗಿರುವ ಹಿಂದು ಧರ್ಮವನ್ನು ಕಟ್ಟಿ ಬೆಳೆಸಲು ಮಹಾನ್ ಪುರುಷರು ಶ್ರಮ ಪಟ್ಟಿದ್ದಾರೆ. ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಧರ್ಮಕ್ಕೆ ಇಂತಹ ಘಟನೆಗಳಿಂದ ನಮ್ಮವರೇ ಅಪಾಯವಾಗುತ್ತಾರೆ.
ಸಮಾಜವನ್ನು ಸರಿ ದಾರಿಯಲ್ಲಿ ನಡೆಸಬೇಕಾದವರು, ಯುವ ಜನಾಂಗಕ್ಕೆ ದಾರಿ ದೀಪವಾಗಬೇಕಾದವರು. ಮಕ್ಕಳಿಗೆ ಆದರ್ಶ ಅನ್ನಿಸಿಕೊಳ್ಳಬೇಕಾದವರು ಹಾದಿ ತಪ್ಪುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಡಾ. ವಿನಯ್ ಗೌಡ ಹೇಳಿದ್ದಾರೆ.
Discussion about this post