ಜೊತೆ ಜೊತೆಯಲಿ ಖ್ಯಾತಿಯ BMW ಮತ್ತು ಎಂಜಿ ಹೆಕ್ಟರ್ ಕಾರಿನ ಒಡತಿಯಾಗಿ ಮೇಘಾ ಶೆಟ್ಟಿ ಹೊರ ಹೊಮ್ಮಿದ್ದಾರೆ. ಅವರ ಮನೆಗೆ ಎರಡು ಕಾರುಗಳು ಬಂದಿದೆ. ಈ ಬಗ್ಗೆ ಅವರೇ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಈ ಹಿಂದೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿದ್ದ ಮೇಘಾ ಶೆಟ್ಟಿ ಸುದ್ದಿ ಮಾಡಿದ್ದರು. ಧಾರವಾಹಿ ತಂಡವೂ ಇದಕ್ಕೆ ಕಾರಣವಾಗಿ ಪ್ರತಿಕ್ರಿಯಿಸಿತ್ತು.
ಪ್ರಸ್ತುತ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು ಜೊತೆಗೆ ನಿರ್ದೇಶಕ ಶಶಾಂಕ್ ತಮ್ಮ ಮುಂದಿನ ಸಿನಿಮಾ ಲವ್ 360ಗಾಗಿ ನಾಯಕಿ ಹುಡುಕಾಟದಲ್ಲಿದ್ದು ಮಾಹಿತಿಯಂತೆ ಮೇಘಾ ಶೆಟ್ಟಿ ಅವರ ಸಂಪರ್ಕ ಮಾಡಿದ್ದಾರೆ ಅನ್ನಲಾಗಿದೆ. ಲವ್ 360 ಸಿನಿಮಾದಲ್ಲಿ ಹೊಸ ಪ್ರತಿಭೆ ಪ್ರವೀಣ್ ನಾಯಕನಾಗಿ ಚಂದನವನಕ್ಕೆ ಪರಿಚಯವಾಗಲಿದ್ದಾರೆ.
Discussion about this post