ನ್ಯೂಯಾರ್ಕ್ : ಕಾಶ್ಮೀರ ವಿಷಯದಲ್ಲಿ ಪದೇ ಪದೇ ಮೂಗು ತೂರಿಸುತ್ತಿರುವ ಪಾಕಿಸ್ತಾನ ಪ್ರತೀ ಬಾರಿಯೂ ಅವಮಾನ ಅನುಭವಿಸುತ್ತದೆ. ವಿಶ್ವದ ಮುಂದೆ ಮಾನ ಮರ್ಯಾದೆ ಹರಾಜುಗೊಂಡರೂ ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರಿಸುತ್ತದೆ.
ಶನಿವಾರ ಆಗಿದ್ದು ಕೂಡಾ ಇದೇ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಭಾರತದ ವಿರುದ್ಧ ಮಾತನಾಡಿದ್ದರು. ಇದಕ್ಕೆ ವಿಶ್ವಸಂಸ್ಥೆಯಲ್ಲೇ ಉತ್ತರ ನೀಡಿರುವ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ, ಇಮ್ರಾನ್ ಖಾನ್ ಬೆವರಿಳಿಸಿದ್ದಾರೆ. ಮೊದಲು ನೀವು POKಯಿಂದ ಗಂಟು ಮೂಟೆ ಕಟ್ಟಿ ಅಂದಿರುವ ದುಬೆ, ಪಾಕಿಸ್ತಾನ ಟೆರರಿಸಂ ಅನ್ನು ಹೇಗೆ ಪೋಷಿಸುತ್ತಿದೆ ಅನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು.
ಸ್ನೇಹ ದುಬೆ ಮಾತುಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯಂಗ್ ಆಫೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ.
ಅಂದ ಹಾಗೇ ಪಾಕ್ ವಿರುದ್ಧ ಗುಡುಗಿರುವ ಸ್ನೇಹ ದುಬೆ JNUವಿನಲ್ಲಿ ಓದಿ ಹೊರ ಬಂದಿರುವವರು 2012 ರ ಬ್ಯಾಚ್ ನ IFS ಅಧಿಕಾರಿಯಾಗಿರುವ ದುಬೆ MPhil ಪಡೆದಿದ್ದಾರೆ. ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ ಬಂದಿದ್ದ ಸ್ನೇಹ ದುಬೆ ಮೊದಲು ವಿದೇಶಾಂಗ ಸಚಿವಾಲಯದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. 2014ರಲ್ಲಿ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾರ್ಯದರ್ಶಿಯಾಗಿ ಕಳುಹಿಸಿಕೊಡಲಾಗಿತ್ತು.
ಗೋವಾ ಹಾಗೂ ಪುಣೆಯಲ್ಲಿ ತಮ್ಮ ಎಜುಕೇಶನ್ ಮುಗಿಸಿರುವ ಸ್ನೇಹ ತಂದೆ ಮಲ್ಪಿ ನ್ಯಾಶನಲ್ ಕಂಪನಿಯ ಉದ್ಯೋಗಿಯಾಗಿದ್ದು ತಾಯಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪಾಕಿಸ್ತಾನ ಹೀಗೆ ಕ್ಯಾತೆ ತೆಗೆದ ಸಂದರ್ಭದಲ್ಲಿ ಭಾರತ ತನ್ನ ಮಹಿಳಾ ಕಾರ್ಯದರ್ಶಿಗಳಿಂದ ಪತ್ಯುತ್ತರ ಕೊಟ್ಟು ನಾರಿ ಶಕ್ತಿಯನ್ನು ತೋರಿಸಿತ್ತು. ಸ್ನೇಹ ದುಬೆ ಈ ಸಾಲಿನಲ್ಲಿ ಮೂರನೇಯವರು.
Discussion about this post