ವಿಶ್ವಕ್ಕೆ ಕೊರೋನಾ ಸೋಂಕು ಹರಡಿದ ಚೀನಾದ ಮೇಲೆ ಹಲವರಿಗೆ ಇನ್ನೂ ಪ್ರೀತಿ ಇದೆ. ಅದ್ಯಾಕೆ ಅನ್ನುವುದು ಇನ್ನೂ ಯಕ್ಷ ಪ್ರಶ್ನೆ. ಅಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಸಾವಿರ ಸಾವಿರ ಸಾಕ್ಷಿಗಳಿದ್ದರೂ ಡ್ರ್ಯಾಗನ್ ರಾಷ್ಟ್ರದ ಬಗ್ಗೆ ಇನ್ನಿಲ್ಲದ ಅನುಕಂಪ ಕೆಲವು ದಡ್ಡ ಜೀವಿಗಳಿಗೆ.
ಇನ್ನು ಸಾವಿರಾರು ಸಂಖ್ಯೆಯ ಮುಸ್ಲಿಮರನ್ನು ಅಕ್ರಮವಾಗಿ ಬಂಧಿಸಿಡಲು ಚೀನಾ ಜೈಲುಗಳನ್ನು ನಿರ್ಮಿಸುತ್ತಿದೆ ಹಾಗೂ ಈಗಾಗಲೇ ಮುಸ್ಲಿಮರನ್ನು ಅಕ್ರಮ ಬಂಧನದಲ್ಲಿ ಇರಿಸಿದೆ ಎಂದು ಮೊಟ್ಟ ಮೊದಲ ಬಾರಿಗೆ ವರದಿ ಮಾಡಿದ್ದ ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಗೆ ಪ್ರತಿಷ್ಟಿತ ಪುಲಿಟ್ಜಿರ್ ಪ್ರಶಸ್ತಿ ಲಭಿಸಿದೆ.
ಬಝ್ ಫೀಡ್ ನ್ಯೂಸ್ ಅನ್ನೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅವರು ಚೀನಾದ ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಸಾವಿರಾರು ಸಂಖ್ಯೆಯ ಮುಸ್ಲಿಮರನ್ನು ಅಕ್ರಮ ಬಂಧನದಲ್ಲಿ ಇರಿಸಿದೆ ಅನ್ನುವುದನ್ನು ಪತ್ತೆ ಮಾಡಿದ್ದರು. ಇದು ಚೀನಾ ಸರ್ಕಾರಕ್ಕೆ ಗೊತ್ತಾಗುತ್ತಿದ್ದಂತೆ ಮೇಘಾ ಅವರನ್ನು ಚೀನಾ ಸರ್ಕಾರ ಹೊರ ಹಾಕಿತ್ತು. ಇದಾದ ಬಳಿಕ ಶಿಬಿರದಿಂದ ತಪ್ಪಿಸಿಕೊಂಡವರನ್ನು ಕಜಕಸ್ತಾನದಲ್ಲಿ ಭೇಟಿಯಾಗಿ ಚೀನಾದ ಕರಾಳ ಮುಖವನ್ನು ವಿಶ್ವಕ್ಕೆ ಪರಿಚಯಿಸಿದ್ದರು.
Discussion about this post