ಬಾಲಿವುಡ್ ನಲ್ಲಿ #MeToo ಅಭಿಯಾನಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಇದೀಗ, ಚಂದನವನದ ಸರದಿ. ಇಲ್ಲೂ ಒಬ್ಬೊಬ್ಬರೇ #MeToo ಅಭಿಯಾನದಲ್ಲಿ ತಮ್ಮ ಮೇಲಾದ ಕಿರುಕುಳ, ದೌರ್ಜನ್ಯಗಳನ್ನ ಬಯಲು ಮಾಡ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ನಟಿ ಸಂಗೀತಾ ಭಟ್ ಕನ್ನಡ ಚಿತ್ರರಂಗದಲ್ಲಿ ತಾನು ಎದುರಿಸಿದ ನೋವನ್ನು ಬಿಚ್ಚಿಟ್ಟಿದ್ದರು. ಹತ್ತು ವರ್ಷದಿಂದ ಇಂಡಸ್ಟ್ರಿಯಲ್ಲಿ ಕೆಲವು ನಿರ್ದೇಶಕ ಹಾಗೂ ನಟರು ತನ್ನನ್ನು ಹೇಗೆ ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು ಅನ್ನುವುದನ್ನು ವಿವರವಾಗಿ ಬರೆದುಕೊಂಡಿದ್ದರು.
ಇದೀಗ ಚಂದನವನದ ನಟಿ, ಗಂಡ ಹೆಂಡತಿ ಖ್ಯಾತಿಯ ಸಂಜನಾ ತಮ್ಮ ಮೊದಲ ಚಿತ್ರದ ಶೂಟಿಂಗ್ ವೇಳೆ ತಮ್ಮ ಮೇಲೆ ಉಂಟಾದ ಲೈಂಗಿಕ ದೌರ್ಜನ್ಯದ ಬಗ್ಗೆ ಬಿಚ್ಚಿಟ್ಟಿದ್ದು, `ಗಂಡ-ಹೆಂಡತಿ’ ಚಿತ್ರದ ನಿರ್ದೇಶಕ ರವಿ ಶ್ರೀವತ್ಸಾ ಶೂಟಿಂಗ್ ವೇಳೆ ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
2006ರಲ್ಲಿ ಬಿಡುಗಡೆಯಾಗಿದ್ದ ‘ಗಂಡ-ಹೆಂಡತಿ’ ಸಿನಿಮಾ ಮೂಲಕ ಸಂಜನಾ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಈ ಸಿನಿಮಾ ಮಾಡಿದಾಗ ಸಂಜನಾಗೆ ಕೇವಲ 16 ವರ್ಷ ವಯಸ್ಸಂತೆ. ಈ ಸಿನಿಮಾ ಚಿತ್ರೀಕರಣದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರು ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ರು ಎಂದು ಈಗ ಸಂಜನಾ ಆರೋಪ ಮಾಡಿದ್ದಾರೆ.
ನನಗೂ ಚಿತ್ರರಂಗದಲ್ಲಿ ತುಂಬಾ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ನಿನ್ನ ವೃತ್ತಿ ಜೀವನ ಚೆನ್ನಾಗಿರಬೇಕು ಅಂದರೆ ಕಿಸ್ಸಿಂಗ್ ಸೀನ್ ಮಾಡು ಎಂದು ನಿರ್ದೇಶಕರು ಒತ್ತಾಯ ಮಾಡಿದ್ದರು. ಅಲ್ಲದೇ ಒಮ್ಮೆಲೇ 50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು. ಬ್ಯಾಕ್ ಲೆಸ್ ಸೀನ್ ಮಾಡುವಾಗಲು ಇಂತಹದ್ದೇ ಹಿಂಸೆಯಾಗಿತ್ತು. ಚಿತ್ರೀಕರಣದ ಸಮಯದಲ್ಲಿ ಭಯ ಹುಟ್ಟಿಸುವ ವಾತಾವರಣ ಇತ್ತು. ನನ್ನ ಮೇಲೆ ದಬ್ಬಾಳಿಕೆ ಮಾಡಿ ಕಿಸ್ಸಿಂಗ್ ಸೀನ್ ಗಳನ್ನು ಮಾಡಿಸಿಕೊಂಡರು. ಈ ವೇಳೆ ವಿದೇಶದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬ್ಯಾಕಾಂಕ್ ನಿಂದ ಬಂದ ನಂತರವೂ ಬೆಂಗಳೂರಿನಲ್ಲಿ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ನಟಿ ಸಂಜನಾ ಆರೋಪಿಸಿದ್ದಾರೆ.
‘ಹಿಂದಿಯ ‘ಮರ್ಡರ್’ ಸಿನಿಮಾದ ರೀಮೇಕ್ ಎಂದು ಗೊತ್ತಿತ್ತು. ಆದ್ರೆ, ಸೌತ್ ಇಂಡಸ್ಟ್ರಿಗೆ ತಕ್ಕಂತೆ ಸಿನಿಮಾ ಬದಲಾಯಿಸುತ್ತೇವೆ. ನಮ್ಮ ಸಂಸ್ಕ್ರತಿಗೆ ತಕ್ಕಂತೆ ಸಿನಿಮಾ ಮಾಡ್ತೀವಿ ಅಂತ ಹೇಳಿದ್ದಕ್ಕೆ ನಾನು ಒಪ್ಪಿಕೊಂಡೆ. ಈ ಚಿತ್ರದಲ್ಲಿ ಒಂದು ಕಿಸ್ ಸೀನ್ ಇಡ್ತೀವಿ ಅಷ್ಟೇ ಅಂದ್ರು. ಆದ್ರೆ, ಒತ್ತಾಯ ಪೂರ್ವಕ ಹೆಚ್ಚು ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ರು’ ಎಂದು ಸಂಜನಾ ಹೇಳಿಕೊಂಡಿದ್ದಾರೆ.
ಮೀಟೂ ಕುರಿತ ಅಭಿಯನಕ್ಕೆ ತಮ್ಮ ಮನಸ್ಸಿನ ನೋವು ಹೇಳುಕೊಳ್ಳಲು ಸರಿಯಾದ ಸಮಯ ಎಂದು ತಮ್ಮ ಮನಸ್ಸಿನ ನೋವು ತೋಡಿಕೊಂಡಿರುವ ಅವರು ಎರಡುಕಾಲು ಲಕ್ಷ ರೂ. ಸಿಗುತ್ತೆ ಎಂದು ಸಿನಿಮಾ ಒಪ್ಪಿಕೊಂಡೆ. ನಿಮ್ಮನ್ನ ಮನೆ ಮಗಳ ತರ ನೋಡಿಕೊಳ್ಳುತ್ತೇವೆ ಹೇಳಿದ್ದ ನಿರ್ದೇಶಕರು ಬಳಿಕ ಕೆಟ್ಟದಾಗಿ ನಡೆಸಿಕೊಂಡರು. ಮೊದಲ ದಿನದ ಶೂಟಿಂಗ್ ಚೆನ್ನಾಗಿತ್ತು. ಆದರೆ ಚಿತ್ರೀಕರಣದ ಮೂರನೇ ದಿನ ಅಮ್ಮನನ್ನು ನನ್ನ ಜೊತೆ ಬರಲು ಬಿಡದೇ ಹೋಟೆಲ್‍ನಲ್ಲೇ ಬಿಟ್ಟಿದ್ದರು. ಅಲ್ಲದೇ ಅಮ್ಮನನ್ನ ಕಾರಣ ಹೇಳಿ ವಾಪಾಸ್ ಕಳಿಸಲು ಪ್ರಯತ್ನ ಮಾಡಿದ್ದರು.
ಒಂದೇ ಕಿಸ್ಸಿಂಗ್ ಸೀನ್ ಅಂತ ಹೇಳಿ ಆಮೇಲೆ ಎರಡನೇ ಕಿಸ್ಸಿಂಗ್ ಸೀನ್ ಮಾಡಲು ಹೇಳಿ ಸುಮಾರು 50ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಬೇಸರ ತೋಡಿಕೊಂಡಿದ್ದಾರೆ.
ಚಿತ್ರ ಶೂಟಿಂಗ್ ವೇಳೆ ಅಸಭ್ಯವಾಗಿ ನಡೆಸಿಕೊಂಡ ಪ್ರತಿಯೊಂದು ದೃಶ್ಯವೂ ನನಗೆ ನೆನಪಿದೆ. ಕಠಿಣ ದೃಶ್ಯಗಳಲ್ಲಿ ನಟಿಸುವ ವೇಳೆಯೂ ಸುರಕ್ಷತೆ ಇರಲಿಲ್ಲ. ಇದನ್ನು ಮಾಡದಿದ್ದರೆ ನೀನು ಸಾಯುವುದೇ ಲೇಸು ಎಂದು ಗದರಿದ್ದರು. ನಿನಗೆ ಬ್ರೇಕ್ ಸಿಕ್ಕರೆ ಮತ್ತೆ ನಮ್ಮತ್ತ ಬರಲ್ಲ, ಸಿನಿಮಾಗಾಗಿ ಎಲ್ಲವನ್ನೂ ಮಾಡಬೇಕು ಎಂದು ಹಿಂಸೆ ನೀಡಿದ್ದರು ಎಂದು ತಿಳಿಸಿದ್ದರು. ಆದರೆ ಎಲ್ಲಾ ನಿರ್ದೇಶಕರು ಹೀಗೆ ಎಂದು ಹೇಳಲ್ಲ ಅನ್ನುವ ಮಾತನ್ನು ಸಂಜನಾ ತಮ್ಮ ಮಾತಿನೊಂದಿಗೆ ಸೇರಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಹಲವು ದೃಶ್ಯಗಳನ್ನ ಒತ್ತಾಯದಿಂದ ಮಾಡಿಸಿದ್ದಾರೆ. ಅದರಲ್ಲೂ ಕ್ಯಾಮೆರಾ ಆಂಗಲ್ ತುಂಬಾ ಕಳಪೆಯಾಗಿದೆ. ಎಲ್ಲೆಲ್ಲೋ ಕ್ಯಾಮೆರಾ ಇಟ್ಟಿದ್ದಾರೆ. ಸೆಕ್ಸಿಯಾಗಿ ಸಿನಿಮಾ ಮಾಡೋದೆ ಬೇರೆ, ಅಶ್ಲೀಲವಾಗಿ ಸಿನಿಮಾ ಮಾಡೋದು ಬೇರೆ. ಅಪಾಯಕಾರಿ ಸನ್ನಿವೇಶದಲ್ಲೂ ಶೂಟಿಂಗ್ ಮಾಡಿಸಿದ್ದರು. ನನ್ನ ಮೇಲೆ ರೇಗಾಡ್ತಿದ್ದರು. ಸಾಯೋದಿಲ್ಲ ಏನೂ ಆಗಲ್ಲಾ ಮಾಡು ಅಂತಿದ್ರು’
ನನಗೆ ಹೇಳಿದ್ದರಲ್ಲಿ 5 ಪರ್ಸೆಂಟ್ ಕೂಡ ಮಾಡಲಿಲ್ಲ. 100 ಪರ್ಸೆಂಟ್ ಬೇರೆಯದ್ದೇ ಮಾಡಿದ್ರು.ಆದರೆ ನಾನು ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಅಭಿನಯಿಸಿದೆ. ನಂತರ ಸಿನಿಮಾ ರಿಲೀಸ್ ಆದ್ಮೇಲೆ ಒಂದೂವರೆ ವರ್ಷ ಯಾವುದು ಪ್ರಾಜೆಕ್ಟ್ ಇರಲಿಲ್ಲ. ಆಮೇಲೆ ತೆಲುಗಿನಲ್ಲಿ ಅವಕಾಶ ಸಿಕ್ತು. ನಂತರ ನಾನು ನನ್ನ ಪ್ರತಿಭೆಯಿಂದ ಬೆಳೆದು ಬಂದೆ” ಎಂದು ಸಂಜನಾ ತಮ್ಮ ಕಹಿ ನೆನಪುಗಳನ್ನು ತೆರೆದಿಟ್ಟಿದ್ದಾರೆ.
https://www.youtube.com/watch?v=4L_L8M1bZHg
Discussion about this post