ಮೆಕ್ ಡೋನಾಲ್ಡ್ ಕಂಪನಿಯ ನಿಯಮದ ಪ್ರಕಾರ ಮ್ಯಾನೇಜರ್ ಆಗಲಿ ಅಥವಾ ಉನ್ನತ ಹುದ್ದೆಯಲ್ಲಿರುವ ಯಾರೇ ಆಗಲಿ ಸಹೋದ್ಯೋಗಿ ಜೊತೆ ನೇರ ಅಥವಾ ಪರೋಕ್ಷವಾಗಿ ಪ್ರೇಮ ಸಂಬಂಧ ಹೊಂದುವಂತಿಲ್ಲ.
ಆದರೆ ಈ ನಿಯಮಗಳನ್ನು ಗಾಳಿಗೆ ತೂರಿದ್ದ ಮೆಕ್ ಡೋನಾಲ್ಡ್ ಸಿಇಒ ಸ್ಟೀವ್ ಈಸ್ಟರ್ ಬ್ರೂಕ್ ಸಹೋದ್ಯೋಗಿ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದ.
ಈ ವಿಷಯ ಕಂಪನಿಯ ಗಮನಕ್ಕೆ ಬರುತ್ತಿದ್ದಂತೆ ಸಂಸ್ಥೆ ಅವರನ್ನು ಕಂಪನಿಯಿಂದ ವಜಾಗೊಳಿಸಿದೆ. ಕಂಪನಿಯ ನಿಯಮಗಳನ್ನು ಉಲ್ಲಂಘಿಸಿ ಮಹಿಳಾ ಸಹೋದ್ಯೋಗಿ ಜೊತೆ ಸಮ್ಮತಿಯ ಸಂಬಂಧ ಹೊಂದಿದ್ದ ಆರೋಪದ ಮೇಲೆ ಸಿಇಒ ವನ್ನು ಕಂಪನಿಯಿಂದ ಹೊರಹಾಕಲಾಗಿದೆ.
ತಾನು ಕಂಪನಿಯಿಂದ ಫೈರ್ ಆಗಿರುವುದನ್ನು ಖಚಿತ ಪಡಿಸಿರುವ ಸ್ಟೀವ್, ತಾನು ಕಂಪನಿಯ ಸಹೋದ್ಯೋಗಿ ಜತೆ ಸಂಬಂಧ ಹೊಂದಿದ್ದು, ಇದು ನನ್ನ ತಪ್ಪು ಎಂದು ಉದ್ಯೋಗಿಗಳಿಗೆ ಇ-ಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ.
ಕಂಪನಿ ನನಗೆ ಉತ್ತಮ ಅವಕಾಶ ನೀಡಿದೆ. ಕಂಪನಿಯ ನಿಯಮ ಉಲ್ಲಂಘಿಸಿರುವ ನಾನು ಮಂಡಳಿಯ ನಿರ್ಧಾರವನ್ನು ಒಪ್ಪಿದ್ದು, ಇದೀಗ ಕಂಪನಿಯಿಂದ ಹೊರಹೋಗಬೇಕಾದ ಸಮಯ ಬಂದಿದೆ ಎಂದು ಮೇಲ್ ನಲ್ಲಿ ಹೇಳಿದ್ದಾರೆ.
Discussion about this post