ಮುಂಬೈ : ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕ ವಿದ್ಯಾರ್ಥಿಯೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿರುವ ಘಟನೆ ನಡೆದಿದೆ.
Sion ಆಸ್ಪತ್ರೆಯ ಅಂತಿಮ ವರ್ಷದ MBBS ವಿದ್ಯಾರ್ಥಿಯೊಬ್ಬರಲ್ಲಿ ಇದೀಗ ಕೊರೋನಾ ಸೋಂಕು ಪತ್ತೆಯಾಗಿದ್ದು ಮೊದಲ ಹಂತದಲ್ಲಿ ಲಸಿಕೆ ಪಡೆದಿದ್ದ ಅವರು ಕೆಲ ದಿನಗಳ ಹಿಂದಷ್ಟೇ ಎರಡನೇ ಡೋಸ್ ಅನ್ನು ಸ್ವೀಕರಿಸಿದ್ದರು.
21 ವರ್ಷದ ವಿದ್ಯಾರ್ಥಿ ಕೋವಿಶೀಲ್ಡ್ ಲಸಿಕೆಯನ್ನು ಕಳೆದ ವಾರ ಪಡೆದಿದ್ದು, ದಿನಗಳ ಹಿಂದೆ ಇವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು.
ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣ ಪರೀಕ್ಷೆಗೆ ಒಳಗಾದ ವೇಳೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ.
ಶನಿವಾರ ರಾತ್ರಿ ವಿದ್ಯಾರ್ಥಿಯನ್ನು ಸೆವನ್ ಹಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರ ಜೊತೆಗೆ ಹಾಸ್ಟೆಲ್ ನಲ್ಲ ವಾಸವಿರುವ ಎಲ್ಲಾ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಅವರೆಲ್ಲರೂ ಕೂಡಾ ವಾರಗಳ ಹಿಂದೆ ಕೊರೋನಾ ಲಸಿಕೆಯ ಎರಡನೇ ಡೋಸ್ ಅನ್ನು ಸ್ವೀಕರಿಸಿದ್ದರು.
ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕವೂ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಸೆವನ್ ಹಿಲ್ ಆಸ್ಪತ್ರೆಯ ವೈದ್ಯರೊಬ್ಬರು “ ಕೊರೋನಾ ಲಸಿಕೆ ಪಡೆದ ತಕ್ಷಣ ಎಲ್ಲರಿಗೂ ರೋಗ ನಿರೋಧಕ ಶಕ್ತಿ ಬಂದು ಬಿಡೋದಿಲ್ಲ. ಲಸಿಕೆಯ ಎರಡನೇ ಡೋಸ್ ಪಡೆದ 45 ದಿನಗಳ ಬಳಿಕವೇ ದೇಹದಲ್ಲಿ ಕೊರೋನಾ ಸೋಂಕು ಸೋಲಿಸಬಲ್ಲ ಪ್ರತಿಕಾಯಗಳು ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಹೀಗಾಗಿ ಎರಡನೇ ಡೋಸ್ ಪಡೆದ 45 ದಿನಗಳ ಕಾಲ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ವಹಿಸಿಕೊಳ್ಳಬೇಕು ಅಂದಿದ್ದಾರೆ.
ಇದೇ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ Sion ಆಸ್ಪತ್ರೆಯ ವೈದ್ಯರು, ಕೊರೋನಾ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು ಕೊರೋನಾ ಸೋಂಕಿನ ಮುಂಜಾಗ್ರತ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಅಂದಿದ್ದಾರೆ.
Discussion about this post