ಮಂಗಳೂರು : ಜನರಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಒಂದು ವಾರಗಳ ಕಾಲ ವಿಶೇಷ ಟ್ರಾಫಿಕ್ ಡ್ರೈವ್ ಹಮ್ಮಿಕೊಂಡಿದ್ದಾರೆ. ದಿನಕ್ಕೊಂದು ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚುವುದು ಟಾಸ್ಕ್. ಅದರಂತೆ ಒಂದು ದಿನ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರು ಟಾರ್ಗೇಟ್ ಆದ್ರೆ, ಮತ್ತೊಂದು ದಿನ ಟಿಂಟೆಡ್ ಗ್ಲಾಸ್ ಬಳಸುವವರ ವಿರುದ್ಧ ಕ್ರಮ, ಇನ್ನೊಂದು ದಿನ ಇನ್ನೊಂದು ಟ್ರಾಫಿಕ್ ನಿಯಮ ಉಲ್ಲಂಘಿಸುವವರಿಗೆ ದಂಡ.
ಹೀಗೆ ಕಳೆದ 5 ದಿನಗಳಿಂದ ನಡೆಯುತ್ತಿರುವ ಸ್ಪೆಷಲ್ ಡ್ರೈವ್ ನಲ್ಲಿ 17.50 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಸೆ.27 ರಂದು ಟಿಂಟೆಡ್ ಗ್ಲಾಸ್ ಹಾಕಿದ್ದಕ್ಕೆ 533 ಪ್ರಕರಣ ದಾಖಲಿಸಿ 2.66 ಲ.ರೂಪಾಯಿ, ಸೆ.28 ರಂದು ದೋಷಪೂರಿತ ನಂಬರ್ ಪ್ಲೇಟ್ ಬಗ್ಗೆ 928 ಪ್ರಕರಣ ದಾಖಲಿಸಿ 4.50 ರೂಪಾಯಿ, ಸೆ.29 ರಂದು ಹೆಲ್ಮೆಟ್ ಬಗ್ಗೆ ಕಾರ್ಯಾಚರಣೆ ನಡೆಸಿ 725 ಪ್ರಕರಣ ದಾಖಲಿಸಿ 3.64 ಲ.ರೂಪಾಯಿ . ಸೆ 30 ರಂದು ವಿಮೆ ದಾಖಲೆ ತಪಾಸಣೆ ನಡೆಸಿ 91 ಪ್ರಕರಣ ದಾಖಲಿಸಿ 98,500 ರೂ. ದಂಡ ಸಂಗ್ರಹಿಸಲಾಗಿದೆ. ಇನ್ನು ಹಳೆಯ ಪ್ರಕರಣಗಳ ಬಾಕಿ ವಸೂಲಿ ವಿಚಾರದಲ್ಲಿ 1003 ಕ್ಕೂ ಪ್ರಕರಣ ಪತ್ತೆ ಹಚ್ಚಿ 5.71 ಲ.ರೂ ಗಳಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.

Discussion about this post