ಮಂಗಳೂರು : ಪತ್ನಿ ಫೇಸ್ ಬುಕ್ ಫ್ರೆಂಡ್ ಜೊತೆ ಪರಾರಿಯಾಗಿದ್ದಾಳೆ ಎಂದು ಶಂಕಿಸಿ, ಆಕೆಯನ್ನು ಕರೆ ತರುವಂತೆ ಪೊಲೀಸರಿಗೆ ದೂರು ನೀಡಿದ ಪ್ರಕರಣ ವಿಟ್ಲದಲ್ಲಿ ನಡೆದಿದೆ.
ಈ ಸಂಬಂಧ ಕೊಳ್ನಾಡು ಗ್ರಾಮದ ಪಾಣಾಜಿಕೋಡಿಯ ಅರುಣ್ ಡಿ ಸೋಜಾ ಎಂಬವರು ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿಲ್ಪಾ ಡಿ ಸೋಜಾ ನಾಪತ್ತೆಯಾದ ಮಹಿಳೆಯಾಗಿದ್ದು, ನಾಪತ್ತೆಯಾದ ಬಳಿಕ ಪತಿಗೆ ಕರೆ ಮಾಡಿದ್ದ ಶಿಲ್ಪಾ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದಾದ ಬಳಿಕ ಅರುಣ್ ಅವರು ಪತ್ನಿ ಶಿಲ್ಪಾ ಅವರಿಗೆ ಅನೇಕ ಬಾರಿ ಕರೆ ಮಾಡಿದ್ದರೂ ಕರೆ ಸ್ವೀಕರಿಸಿರಲಿಲ್ಲ.
ಹೀಗಾಗಿ ಫೇಸ್ ಬುಕ್ ನಲ್ಲಿ ಪರಿಚಯವಾದ ಬೆಂಗಳೂರಿನ ನಿವಾಸಿ ಜೊತೆ ಪತ್ನಿ ಪರಾರಿಯಾಗಿರಬೇಕೆಂದು ಅರುಣ್ ಶಂಕಿಸಿದ್ದಾರೆ.
Discussion about this post