ಮಂಗಳೂರು : ಕೊರೋನಾ ಮಹಾಮಾರಿ ಹಲವರ ಬದುಕನ್ನು ಬರ್ಬಾದ್ ಮಾಡಿದೆ. ಅದರಲ್ಲೂ ಶಿಕ್ಷಣ ವ್ಯವಸ್ಥೆಯನ್ನು ಬುಡಮೇಲು ಮಾಡಿರುವ ವುಹಾನ್ ವೈರಸ್, ವಿದ್ಯಾರ್ಥಿಗಳ ಭವಿಷ್ಯವೇನು ಅನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ಈ ನಡುವೆ ಮಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ತಂಡವೊಂದು ನೇರಳೆ ಹಣ್ಣು ವ್ಯಾಪಾರದಲ್ಲಿ ತೊಡಗಿಕೊಂಡಿದ್ದು, ಕೊರೋನಾ ಸಂಕಷ್ಟವನ್ನು ಎದುರಿಸಲು ಸಜ್ಜಾಗಿದ್ದಾರೆ.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿ ಈ ತಂಡವನ್ನು ಕಟ್ಟಿದ್ದು, ಒಟ್ಟು 24 ವಿದ್ಯಾರ್ಥಿಗಳು ಈ ತಂಡದಲ್ಲಿದ್ದಾರೆ. ಮಂಗಳೂರು ನಗರ ಬೀದಿ ಬೀದಿ ಸುತ್ತುವ ಅವರು ಲಾಕ್ಡೌನ್ ಅವಧಿಯಲ್ಲಿ ವ್ಯಾಪಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂಲಕ ಆರ್ಥಿಕವಾಗಿ ಸಬಲರಾಗುವತ್ತ ದೃಷ್ಟಿ ನಿಟ್ಟಿದ್ದಾರೆ. ನಾಳೆ ಕೊರೋನಾ ಆತಂಕ ಕರಗಿದ ಮೇಲೆ ಈ ಹಣ ಸಹಾಯವಾಗಬಹುದು ಅನ್ನುವುದು ಇವರ ಆಶಯ.
ಒಂದು ಕಿಲೋ ನೇರಳೆ ಹಣ್ಣಿಗೆ ಪ್ರಸ್ತುತ 200 ರೂ. ಇದ್ದು. ಕೊರೋನಾ ಸಂದರ್ಭದಲ್ಲಿ ಈ ಹಣ್ಣಿಗೆ ತೀವ್ರ ಬೇಡಿಕೆ ಇದೆ. ಮೆಡಿಸಿನ್ ಮೌಲ್ಯ, ರೋಗ ನಿರೋಧಕ ಶಕ್ತಿ ಹೊಂದಿರುವ ಕಾರಣ ಜನ ಕೂಡಾ ಹಣ್ಣುಗಳನ್ನು ಮುಗಿ ಬಿದ್ದು ಖರೀದಿಸುತ್ತಾರೆ.
ಪ್ರತಿದಿನ 24 ವಿದ್ಯಾರ್ಥಿಗಳು 200 ಕೆಜಿ ನೇರಳೆ ಹಣ್ಣು ಮಾರಾಟ ಮಾಡುತ್ತಿದ್ದು, ಒಣಗಿದ ಹಣ್ಣಿನ ಬೀಜಗಳು ಪ್ರತಿ ಕಿಲೋಗೆ 800 ರೂಗೆ ಮಾರಾಟವಾಗುತ್ತಿದೆ.
ಹಾಗಾದ್ರೆ ಈ ಐಡಿಯಾ ಹುಟ್ಟಿದ್ದು ಹೇಗೆ ಅಂದ್ರೆ ಅದೊಂದು ಡಿಫರೆಂಟ್ ಸ್ಟೋರಿ, ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ವಿದ್ಯಾರ್ಥಿ ಕೊರೊನಾದ ಎರಡನೇ ಅಲೆಯಿಂದ ಸಾಕಷ್ಟು ಪೆಟ್ಟು ತಿಂದಿದ್ದರು. ಕಷ್ಟಕ್ಕೇನು ಪರಿಹಾರ ಎಂದು ಗೆಳೆಯರ ಬಳಿ ಕೇಳಿದ್ರೆ ಅವರದ್ದು ಸಂಕಷ್ಟದ ಕಥೆ. ಹೀಗಾಗಿ ಕ್ಯಾಟರಿಂಗ್, ಡೆಕೊರೇಶನ್ ಕೆಲಸಗಳಿಗೆ ಸೇರಿಕೊಂಡರು. ಲಾಕ್ ಡೌನ್ ಕಾರಣದಿಂದ ಆ ಕೆಲಸವೂ ಕೈ ಹಿಡಿಯಲಿಲ್ಲ.
ಹೀಗಾಗಿ ನೇರವಾಗಿ ನೇರಳೆ ಹಣ್ಣಿವ ವ್ಯಾಪಾರಕ್ಕೆ ಇಳಿದ ವಿದ್ಯಾರ್ಥಿಗಳು ಕೈ ತುಂಬಾ ಅಲ್ಲದಿದ್ದರೂ ಪರವಾಗಿಲ್ಲ ಅನ್ನುವ ಮಟ್ಟಿಗೆ ಸಂಪಾದನೆ ಮಾಡಿದ್ದಾರೆ.
ಅಂದ ಹಾಗೇ ನಿಮಗೇನಾದರೂ ವಿದ್ಯಾ ಅಂದ ಹಾಗೇ ನಿಮಗೇನಾದರೂ ವಿದ್ಯಾರ್ಥಿಗಳಿಗಳಿಗೆ ಸಹಾಯ ಮಾಡಬೇಕು, ಹಣ್ಣು ಖರೀದಿಸಬೇಕು ಅಂದಿದ್ರೆ, ವಿದ್ಯಾರ್ಥಿಗಳು ನಗರದ, ಟಿಎಂಎ ಪೈ ಹಾಲ್, ಲೇಡಿಹಿಲ್, ಉರ್ವ ಸ್ಟೋರ್ ಬಳಿ ಕಾಣ ಸಿಗುತ್ತಾರೆ.
Discussion about this post