Sunday, April 18, 2021

ರೌಡಿ ಶೀಟರ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ : ಪ್ರಿಯಕರಿಗೆ ಬಿತ್ತು ಗೂಸಾ

Must read

- Advertisement -
- Advertisement -

ಮಂಡ್ಯ : ರೌಡಿ ಶೀಟರ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡ ಕರ್ಮಕ್ಕೆ ವ್ಯಕ್ತಿಯೊಬ್ಬ ಹಿಗ್ಗಾಮುಗ್ಗಾ ಥಳಿಸಿಕೊಂಡಿದ್ದಾನೆ.

ಮಂಡ್ಯದ ಹೊಸಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಪತ್ನಿ ಜೊತೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಆಕೆಯ ಪ್ರಿಯಕರನಿಗೆ ರೌಡಿ ಶೀಟರ್ ಗಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೆ ಒಳಗಾದವರನ್ನು ಹರ್ಷಿತಾ ಮತ್ತು ಆಕೆಯ ಪ್ರಿಯಕರ ಚೇತನ್ ಎಂದು ಗುರುತಿಸಲಾಗಿದೆ. ರೌಡಿ ಶೀಟರ್ ನಾಗೇಂದ್ರ ಅಲಿಯಾಸ್ ಕುಳ್ಳನಾಗ ಪ್ರೀತಿಸಿ 8 ವರ್ಷಗಳ ಹಿಂದೆ ಹರ್ಷಿತಾಳನ್ನು ಮದುವೆಯಾಗಿದ್ದ. ದಂಪತಿಗೆ 8 ವರ್ಷದ ಮಗನಿದ್ದಾನೆ.

ಈ ನಡುವೆ ಹರ್ಷಿತಾ ಕದ್ದು ಮುಚ್ಚಿ ಚೇತನ್ ಜೊತೆಗೆ ಸಂಬಂಧ ಬೆಳೆಸಿದ್ದಾಳೆ ಎನ್ನಲಾಗಿದೆ. ತನ್ನ ಮನೆಯಲ್ಲಿ ಪತ್ನಿ ಹರ್ಷಿತಾ ಮತ್ತು ಪ್ರಿಯಕರ ಇಬ್ಬರೂ ಒಟ್ಟಿಗೆ ನಾಗನ ಕೈಗೆ ಸಿಕ್ಕಿ ಬಿದ್ದಿದ್ದು, ಕುಳ್ಳನಾಗ ಮತ್ತು ಆತನ ಸಹಚರ ಕಟ್ಟೆ ಯೋಗೇಶ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಈ ವೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೇತನ್ ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಗಳಾದ ಕುಳ್ಳನಾಗ ಹಾಗೂ ಯೋಗೇಶ್ ನನ್ನು ಮಂಡ್ಯ ಪೂರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇದೀಗ ಕುಳ್ಳ ನಾಗನಿಗೆ ಕೊರೋನಾ ಸೋಂಕಿರುವುದು ಗೊತ್ತಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
- Advertisement -
- Advertisement -

Latest article