Thursday, March 4, 2021

ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡುತ್ತೇನೆ ಅಂದಿದ್ಯಾಕೆ ಯಶ್

Must read

- Advertisement -
- Advertisement -

ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ. ರಾಜ್ಯ ಬಿಡ್ತೀನಿ ಅಂತಾ ಸುಮ್ಮನೇ ಹೇಳುತ್ತಿಲ್ಲ. ಹಾಗೆ ಹೇಳಿ ಇಲ್ಲಿಯೇ ಇರಲ್ಲ, ನಿಜವಾಗ್ಲೂ ರಾಜ್ಯ ಬಿಡ್ತೀನಿ. ಬರೀ ಬಾಯಿಮಾತಿಗೆ ಹೇಳೋದು ಅಲ್ಲಪ್ಪ.. ನಿಜವಾಗ್ಲೂ ಹೇಳ್ತಾ ಇದ್ದೀನಿ. ಅರ್ಥಾ ಆಗಿರೋರಿಗೆ ಅರ್ಥಾ ಆಗಿರುತ್ತೆ ಅಂತಾ ಮಾರ್ಮಿಕವಾಗಿ ದಳಪತಿಗಳನ್ನು ಯಶ್ ತಿವಿದಿದ್ದಾರೆ.

ಮಂಡ್ಯದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು ನಾನು ಜೆಡಿಎಸ್​​ ಕಳ್ಳರ ಪಕ್ಷ ಅಂತಾ ಹೇಳಿದ್ದೇನೆ ಎಂದು ನನ್ನ ಮೇಲೆ ಒಬ್ಬರು ಆರೋಪ ಮಾಡಿದ್ದಾರೆ. ನಾನು ತುಂಬಾ ನಂಬೋದು ಧರ್ಮಸ್ಥಳದ ಮಂಜುನಾಥ ಸ್ವಾಮಿ. ಆ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡುತ್ತೇನೆ. ಒಂದು ವೇಳೆ ನಾನು ಕಳ್ಳರ ಪಕ್ಷ ಅಂತಾ ಹೇಳಿದ್ದರೆ ಅವ್ರು ಹೇಳಿದ್ದನ್ನ ಕೇಳುತ್ತೇನೆ. ಒಂದು ವೇಳೆ ಹಾಗೆ ಹೇಳಿದ್ದು ಸತ್ಯವಾಗಿದ್ದರೆ ನಾನು ಮಂಡ್ಯ ಅಲ್ಲ, ಸಿನಿಮಾ ಇಂಡಸ್ಟ್ರಿ ಅಲ್ಲ ರಾಜ್ಯವನ್ನೇ ಬಿಟ್ಟು ಹೋಗ್ತಿನಿ ಎಂದು ಸವಾಲು ಹಾಕಿದ್ದಾರೆ.

ಇಲ್ಲಿ ನಡೆಯುತ್ತಿರುವುದು ಚುನಾವಣೆ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ಮಂಡ್ಯದ ಸೊಸೆ ನಿಂತ ತಕ್ಷಣ ಏನು ಮಾತು ಏನು ದ್ವೇಷ.

ನಾನು ಸುಮಾರು ಕಡೆ ಪ್ರಚಾರಕ್ಕೆ ಹೋಗಿದ್ದೇನೆ, ಆದ್ರೆ ಇಷ್ಟು ಕೆಟ್ಟದಾಗಿ ಯಾರು ನಡೆಸಿಕೊಂಡಿಲ್ಲ ಎಂದು ಖೇದ ವ್ಯಕ್ತಪಡಿಸಿದ ಯಶ್ ಪ್ರಚಾರದ ಸಮಯದಲ್ಲಿ ದರ್ಶನ್, ಅಮ್ಮ ಎಲ್ಲವನ್ನೂ ನುಂಗಿ ಕೂತಿದ್ರು. ಆದ್ರೆ ನಮ್ಮ ರಕ್ತ ಕೇಳೋದಿಲ್ಲ. ಆದ್ರೂ ಎಲ್ಲರ ಬಗ್ಗೆ ಗೌರವವಿದೆ. ಹಾಗಂತ ನಮ್ಮ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ರು ನಾನು ಸುಮ್ಮನಿರೋದಿಲ್ಲ. ಅವನು ಎಷ್ಟೇ ಶಕ್ತಿಯಾಗಿದ್ದರೂ ಪರವಾಗಿಲ್ಲ ಎಂದು ದಳಪತಿಗಳ ವಿರುದ್ಧ ಸಿಡಿದಿರುವುದನ್ನು ಸಮರ್ಥಿಸಿಕೊಂಡರು.

- Advertisement -
- Advertisement -
- Advertisement -

Latest article