ಉಡುಪಿ : ದುಷ್ಟರ ಪಿತೂರಿಗೆ ಸಿಲುಕಿ ಒಂದು ವರ್ಷ 8 ತಿಂಗಳ ಕಾಲ ಸೌದಿ ಅರೇಬಿಯಾದಲ್ಲಿ ಜೈಲು ವಾಸ ಅನುಭವಿಸಿ ಬಂದಿರುವ ಹರೀಶ್ ಬಂಗೇರ ಗುರುವಾರ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹರಕೆ ತೀರಿಸಿ ಬಂದಿದ್ದಾರೆ.
ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನ ಭೇಟಿ ಕುರಿತಂತೆ ಮಾತನಾಡಿರುವ ಹರೀಶ್ ಬಂಗೇರ, ಅಂದಾಜು 2 ವರ್ಷ ಜೈಲಿನಲ್ಲಿದೆ. ಯಾವ ತಪ್ಪು ಮಾಡದಿದ್ರು ನಾನು ಜೈಲಿನಲ್ಲಿ ಕಾಲ ಕಳೆಯುವಂತಾಯ್ತು. ನನ್ನ ಜೀವನ ಮುಗಿದು ಹೋಯ್ತು, ತಾಯಿ ಹೆಂಡತಿ ಮಗಳ ಮುಖವನ್ನು ಇನ್ನು ನಾನು ನೋಡುವುದಿಲ್ಲ ಎಂದು ಭಾವಿಸಿದ್ದೆ. ಈ ವೇಳೆ ನನಗೆ ನೆನಪಾಗಿದ್ದು ಆನೆಗುಡ್ಡೆ. ನಾನು ನಿರಪರಾಧಿ ಎಂದು ಜಗತ್ತಿಗೆ ಗೊತ್ತಾದ್ರೆ ದೇವಸ್ಥಾನಕ್ಕೆ ಬರುವುದಾಗಿ ಹರಕೆ ಹೊತ್ತುಕೊಂಡಿದ್ದೆ. ಆದರಂತೆ ಮನೆಗೆ ಬಂದ ಮರು ದಿನವೇ ದೇವಸ್ಥಾನಕ್ಕೆ ಬಂದಿರುವುದಾಗಿ ಹೇಳಿದ್ದಾರೆ.

ಇದೇ ವೇಳೆ ತನ್ನ ಬಿಡುಗಡೆ ಶ್ರಮಿಸಿದ ಎಲ್ಲರನ್ನೂ ನೆನಪಿಸಿಕೊಂಡಿರುವ ಹರೀಶ್ ಬಂಗೇರ, ಶಾಸಕರು, ಸಂಸದರು, ಸ್ಥಳೀಯ ಮುಖಂಡರು, ಸಂಘ ಸಂಸ್ಥೆಯವರಿಗೆ ಧನ್ಯವಾದ ಅಂದಿದ್ದಾರೆ. ಇನ್ನುಳಿದಂತೆ ಜೈಲು ವಾಸದ ದಿನಗಳ ಬಗ್ಗೆ ಮುಂದೊಂದು ದಿನ ವಿವರವಾಗಿ ಮಾತನಾಡುವುದಾಗಿ ಅವರು ಹೇಳಿದ್ದಾರೆ.

Discussion about this post