ನಿಮ್ಮ ಮಗ ರ‍್ಯಾಶ್ ಡ್ರೈವ್ ಮಾಡ್ತಾನೆ, ಸ್ವಲ್ಪ ಬುದ್ದಿ ಹೇಳಿ ಅಂದ ವೃದ್ಧ ವ್ಯಕ್ತಿಯೊಬ್ಬರ ಮೇಲೆ ದೌರ್ಜನ್ಯ ನಡೆದ ಘಟನೆ ಬೆಂಗಳೂರಿನ ಹುಳಿ ಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ತಮಗಾಗಿರುವ ಅನ್ಯಾಯ ಕುರಿತಂತೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ರೆ ನಿಮಗೆ ಮಯಸ್ಸಾಗಿದೆ, ಸುಮ್ಮನೇ ಯಾಕೆ ಹೀಗೆ ಮಾಡಿಕೊಳ್ಳುತ್ತೀರಿ ಎಂದು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗೆ ಬುದ್ದಿ ಮಾತು ಹೇಳಿ ಕಳುಹಿಸಿದ್ದಾರೆ ಪೊಲೀಸರು.
ನಿವೃತ್ತ ಬ್ಯಾಂಕ್ ಮ್ಯಾನೇಜರ್ ಬೆನೆಟ್ ಮತ್ತು ಸುಶೀಲಾ ಅರಕೆರೆಯ ಸರಸ್ವತಿ ಪುರಂನಲ್ಲಿ ವಾಸವಾಗಿದ್ದಾರೆ. ಪಕ್ಕದ ಮನೆಯ ಮಹೇಂದ್ರ ಕಶ್ಯಪ್ ಹಾಗೂ ಭಾಗ್ಯ ದಂಪತಿ ಮಗ ಮೈನರ್ ಆಗಿದ್ದು, ನಿತ್ಯ ಮನೆ ಮುಂದೆ ರ‍್ಯಾಶ್ ಡ್ರೈವಿಂಗ್ ಮಾಡುತ್ತಿರುತ್ತಾನೆ. ಯುವಕನಿಗೆ ಬುದ್ಧಿವಾದ ಹೇಳಿದರೂ ಕಿವಿಗೆ ಹಾಕಿಕೊಳ್ಳದಕ್ಕೆ ಬೆನೆಟ್ ಫೋಟೋ ತೆಗೆದುಕೊಂಡಿದ್ದರು.
ಮಗನ ಫೋಟೋ ತೆಗೆದ ಕಾರಣಕ್ಕೆ ರೊಚ್ಚಿಗೆದ್ದ ಮಹೇಂದ್ರ ಮತ್ತು ಭಾಗ್ಯ ಬೆನೆಟ್ ಮೇಲೆ ಪೊರಕೆ ಹಾಗೂ ದೊಣ್ಣೆಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಮಹೇಂದ್ರ ಅದೇನು ಮಗನ ಫೋಟೋ ತೆಗೆಯುತ್ತೀಯಾ, ನನ್ದು ತಗೋ ಎಂದು ಪ್ಯಾಂಟ್ ಬಿಚ್ಚಿ ಅಸಹ್ಯವಾಗಿ ವರ್ತಿಸಿದ್ದಾನೆ.
Discussion about this post