ಖ್ಯಾತ ಪುಟ್ಭಾಲ್ ಆಟಗಾರ ಲಿಯೋನಲ್ ಮೆಸ್ಸಿ ಬಾರ್ಸಿಲೋನಾ ಎಫ್ ಸಿ ಫುಟ್ಬಾಲ್ ತಂಡಕ್ಕೆ ಗುಡ್ ಬೈ ಹೇಳಿದ್ದಾರೆ.
ಬಾರ್ಸಿಲೋನಾ ತಂಡದ ಜೊತೆಗೆ ಮಾಡಿಕೊಂಡ ಒಪ್ಪಂದದಲ್ಲಿ ಸರಿಹೊಂದದ ಕಾರಣ ಅವರು ತಂಡ ತೊರೆದಿದ್ದು, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮೆಸ್ಸಿ ಮತ್ತು ಬಾರ್ಸಿಲೋನಾ ನಡುವೆ ಹೊಂದಾಣಿಕೆಯಾಗಿಲ್ಲ ಅನ್ನಲಾಗಿದೆ.
ಈ ಹಿಂದೆ ಅಂದ್ರೆ ಜೂನ್ ತಿಂಗಳಲ್ಲಿ ಲಿಯೋನೆಲ್ ಮೆಸ್ಸಿ ಬೇರೆ ಕ್ಲಬ್ ಕಡೆ ತೆರಳಲು ಮುಂದಾಗಿದ್ದರು. ಆದರೆ ಅದು ಹೇಗೋ ಬಾರ್ಸಿಲೋನಾ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಆದರೆ ಈ ಬಾರಿ ಆ ಪ್ರಯತ್ನ ಯಶಸ್ವಿಯಾಗಿಲ್ಲ.
Discussion about this post