ಬೆಂಗಳೂರು ಮಂಗಳೂರು ರೈಲುಗಳ ಓಡಾಟ ಶೀಘ್ರದಲ್ಲೇ ಪ್ರಾರಂಭವಾಗೋ ಲಕ್ಷಣಗಳಿಲ್ಲ
ಎಡಕುಮೇರಿ ಹಾಗೂ ಕಡಗರವಳ್ಳಿ ನಿಲ್ದಾಣಗಳ ಮಧ್ಯೆ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಈ ಹಿಂದೆ ರದ್ದುಪಡಿಸಲಾದ ರೈಲುಗಳು ಇನ್ನು ಕೆಲವು ದಿನಗಳ ರದ್ದುಗೊಳ್ಳಲಿದೆ.
ರದ್ದುಗೊಂಡ ರೈಲುಗಳ ವಿವರ ಹೀಗಿದೆ
1.ರೈಲು ಸಂಖ್ಯೆ 16511 ಕ್ರಾ.ಸಂ.ರಾ ಬೆಂಗಳೂರು- ಕಣ್ಣೂರು ಎಕ್ಸ್ಪ್ರೆಸ್ ರೈಲನ್ನು ಆ.4, 5ರಂದು ಸಂಪೂರ್ಣವಾಗಿ ರದ್ದುಮಾಡಲಾಗಿದೆ.
2.ರೈಲು ಸಂಖ್ಯೆ 16512 ಕಣ್ಣೂರು-ಕ್ರಾ.ಸಂ.ರಾ ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಆ.5, 6ರಂದು ರದ್ದುಪಡಿಸಲಾಗಿದೆ.
3.ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಆ.4 ಮತ್ತು 5ರಂದು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
4.ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಆ.5 ಮತ್ತು 6ರಂದು ಸಂಪೂರ್ಣ ರದ್ದುಪಡಿಸಲಾಗಿದೆ.
5.ರೈಲು ಸಂಖ್ಯೆ 16585 ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್ ರೈಲು ಆ.4 ಮತ್ತು 5ರಂದು ಸಂಪೂರ್ಣವಾಗಿ ರದ್ದಾಗಿದೆ.
6.ರೈಲು ಸಂಖ್ಯೆ 16586 ಮುರುಡೇಶ್ವರ -ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ಆ.5 ಮತ್ತು 6ರಂದು ಸಂಪೂರ್ಣವಾಗಿ ರದ್ದಾಗಿದೆ.
7.ರೈಲು ಸಂಖ್ಯೆ16595 ಕ್ರಾ.ಸಂ.ರಾ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ ರೈಲು ಆ.4 ಮತ್ತು 5ರಂದು ರದ್ದುಪಡಿಸಲಾಗಿದೆ.
8.ರೈಲು ಸಂಖ್ಯೆ 16596 ಕಾರವಾರ –ಕ್ರಾ.ಸಂ.ರಾ ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ ರೈಲು ಆ. 5 ಮತ್ತು 6ರಂದು ಸಂಪೂರ್ಣ ರದ್ದಾಗಿದೆ.
9.ರೈಲು ಸಂಖ್ಯೆ 16575 ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್ಪ್ರೆಸ್ ಆ. 4ರಂದು ರದ್ದುಪಡಿಸಲಾಗಿದೆ
10.ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ -ಯಶವಂತಪುರ ಜಂಕ್ಷನ್ ಗೋಮಟೇಶ್ವರ ಎಕ್ಸ್ಪ್ರೆಸ್ ರೈಲನ್ನು ಆ.5ರಂದ ರದ್ದುಗೊಳಿಸಲಾಗಿದೆ.
11.ರೈಲು ಸಂಖ್ಯೆ 16515 ಯಶವಂತಪುರ ಜಂಕ್ಷನ್- ಕಾರವಾರ ಎಕ್ಸಪ್ರೆಸ್ ರೈಲನ್ನು ಆ.5ರಂದು ರದ್ದುಪಡಿಸಲಾಗಿದೆ.
12.ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ಜಂಕ್ಷನ್ ರೈಲನ್ನು ಆ.6ರಂದು ಸಂಪೂರ್ಣ ರದ್ದುಪಡಿಸಲಾಗಿದೆ.
Due to the landslide between Yedakumeri and Kadagaravalli in the South Western Railway, the following train services are cancelled: