ಒಂದಿಷ್ಟು ವರ್ಷಗಳ ಕಾಲ ಕಿರುತೆರೆ ವೀಕ್ಷಕರಿಗೆ ನೆಚ್ಚಿನ ನಟನಾಗಿದ್ದ ಜಗನ್, ಸೀತಾವಲ್ಲಭ ಧಾರಾವಾಹಿಯ ಬಳಿಕ ಟಿವಿಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ ಮತ್ತೆ ಲಕ್ಷಣ ಅನ್ನುವ ಧಾರಾವಾಹಿ ಮೂಲಕ ಜಗನ್ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಅದಕ್ಕಿಂತ ಮುಂಚೆ ಜಗನ್ ಯಾರು ಅನ್ನುವುದರ ಕಡೆಗೆ ದೃಷ್ಟಿ ಹಾಯಿಸುವುದಾದ್ರೆ. ಜಗನ್ ನಡೆದ ಬಂದ ದಾರಿ ಕಲ್ಲು ಮುಳ್ಳುಗಳಿಂದ ಕೂಡಿತ್ತು. ಸಾಕಷ್ಟು ಸಂಕಷ್ಟದ ದಿನಗಳನ್ನು ದಾಟಿಯೇ ಅವರು ಈ ಎತ್ತರಕ್ಕೆ ಬೆಳೆದಿದ್ದಾರೆ. 10ನೇ ತರಗತಿ ಪಾಸ್ ಮಾಡಿದ ಜಗನ್ ಇನ್ನೇನು ಪಿಯುಸಿ ಮೆಟ್ಟಿಲು ಹತ್ತಬೇಕು, ಆಗ ತಂದೆಯಿಂದ ಬಂದ ಆದೇಶ ಅವರಲ್ಲಿ ಗಾಬರಿ ಹುಟ್ಟಿಸಿತ್ತು. ಮಗನಿಗೆ ಬದುಕಿನ ಪಾಠ ಕಲಿಸುವ ನಿಟ್ಟಿನಲ್ಲಿ ಬೇಸಿಗೆ ರಜೆಯಲ್ಲಿ ಜಗನ್ ಗ್ಯಾರೇಜ್ ಗೆ ಕೆಲಸಕ್ಕೆ ಹೋಗಬೇಕು ಅನ್ನುವುದು ಅವರ ನಿರ್ಧಾರವಾಗಿತ್ತು. ಆದರೆ ಗ್ಯಾರೇಜ್ ಗೆ ಹೋಗಲು ಒಪ್ಪದ ಜಗನ್ ಝೆರಾಕ್ಸ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಮೂರು ತಿಂಗಳು ಮಾಡಿದ ಕೆಲಸ ಅವರ ಬದುಕಿಗೊಂದು ನೀತಿ ಪಾಠವಾಯ್ತು.
Discussion about this post