ಬೆಂಗಳೂರು : ಟಿಕ್ ಟಾಕ್ ಬ್ಯಾನ್ ಆದ ಬೆನ್ನಲ್ಲೇ ಜನಪ್ರಿಯಗೊಂಡಿರುವ ಭಾರತೀಯ ವಿಡಿಯೋ ಶೇರಿಂಗ್ APP ROPOSO ಮೇಲೆ ಪೊಲೀಸ್ ಕೇಸ್ ದಾಖಲಾಗಿದೆ.
ಜನಪ್ರಿಯತೆಯ ಅಮಲಿನಲ್ಲಿ ಮಾಡಿಕೊಂಡ ಎಡವಟ್ಟು ಇದೀಗ ಸಂಸ್ಥೆಯ ಬುಡಕ್ಕೆ ನೀರು ತಂದಿದೆ.
ಕಾಪಿರೈಟ್ಸ್ ಉಲ್ಲಂಘನೆ ಮಾಡಲಾಗಿದೆ ಅನ್ನುವ ಆರೋಪ ರೊಪೊಸೊ ಸಂಸ್ಥೆ ಮೇಲೆ ಕೇಳಿ ಬಂದಿದ್ದು ಈ ಸಂಬಂಧ ಲಹರಿ ಮ್ಯೂಸಿಕ್ ಸಂಸ್ಥೆ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ತಾನು ಹಕ್ಕು ಹೊಂದಿರುವ ಹಾಡುಗಳನ್ನ ಅನುಮತಿಯಲ್ಲದೆ ಬಳಕೆ ಮಾಡಲಾಗುತ್ತಿದೆ ಎಂದು ಯಶವಂತಪುರ ಠಾಣೆಯಲ್ಲಿ ಲಹರಿ ಮ್ಯೂಸಿಕ್ ಮುಖ್ಯಸ್ಥ ಲಹರಿ ವೇಲು ದೂರು ದಾಖಲಿಸಿದ್ದರು.
ಈ ಕುರಿತು ಕಾಪಿ ರೈಟ್ಸ್ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೆಳ್ಳಂದೂರಿನ ಗ್ಲ್ಯಾನ್ಸ್ ( ROPOSO ಮಾತೃ ಸಂಸ್ಥೆ) ಕಂಪನಿ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಪೊಲೀಸರ ತನಿಖೆಗೆ ಸಂಸ್ಥೆಯ ಮುಖ್ಯಸ್ಥರು ಸಹಕರಿಸಿದ ಹಿನ್ನಲೆಯಲ್ಲಿ ಇದೀಗ ನೋಟಿಸ್ ನೀಡಲಾಗಿದೆ.
ಕಳೆದ ವರ್ಷ T-Series ಮ್ಯೂಸಿಕ್ ಸಂಸ್ಥೆ ROPOSO ಮೇಲೆ ಕಾಪಿ ರೈಟ್ ಉಲ್ಲಂಘನೆಯ ಕೇಸು ಜಡಿದಿತ್ತು.
Discussion about this post