ಇವತ್ತಿನ ರಾಜಕೀಯ ಪರಿಸ್ಥಿತಿ ಹದಗೆಟ್ಟಿದ್ದು, ಒಳ್ಳೆಯವರು ರಾಜಕೀಯ ಮಾಡಲಾಗದ ಪರಿಸ್ಥಿತಿ ತಲುಪಿದೆ. ಹೀಗಾಗಿ ಈ ರಾಜಕೀಯ ವ್ಯವಸ್ಥೆಯಿಂದ ಹಿಂದೆ ಸರಿಯಲು ಬಯಸಿದ್ದೇನೆ. ರಾಜಕೀಯದಲ್ಲಿ ಮುಂದುವರಿಯುವ ಹುಚ್ಚು ನನಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಅವರು ಉಪ ಚುನಾವಣೆಯಲ್ಲಿ ನಿಖಿಲ್ ಹಾಗೂ ಪ್ರಜ್ವಲ್ ರೇವಣ್ಣ ಸ್ಪರ್ಧಿಸುತ್ತಾರೆ ಅನ್ನುವುದು ಕಪೋಲಕಲ್ಪಿತ ಸುದ್ದಿ ಎಂದು ಹೇಳಿದ್ದಾರೆ.
ಇದೇ ವೇಳೆ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ ನಿಮ್ಮ ತೆವಳುಗಳಿಗೆ ಸುದ್ದಿ ಮಾಡುವುದನ್ನು ನಿಲ್ಲಿಸಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ನನಗೆ ಇಷ್ಟವಿರಲಿಲ್ಲ. ಐದು ವರ್ಷಗಳ ಕಾಲ ಅವನು ಚಿತ್ರರಂಗದಲ್ಲಿ ಮುಂದುವರಿಸಲು ಬಯಸಿದ್ದೆ ಅಂದರು.
ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಕಿಡಿ ಕಾರಿದ್ದು ಅವರ ವೈಯುಕ್ತಿಕ ವಿಚಾರ. ಆ ಅಧಿಕಾರವೂ ಅವರಿಗಿದೆ. ಹಾಗಂತ ನಿಖಿಲ್ ಸ್ಪರ್ಧೆ ವಿಚಾರದಲ್ಲಿ ಕುಮಾರಸ್ವಾಮಿ ಹೇಳಿರುವ ಮಾತುಗಳನ್ನು ನಂಬುವುದು ಕಷ್ಟ. ತಂದೆಗೆ ಮಗ ನಿಲ್ಲುವುದು ಇಷ್ಟವಿಲ್ಲ ಅಂದ ಮೇಲೂ, ಮಗ ಚುನಾವಣೆ ನಿಲ್ತಾನೆ ಅಂದ್ರೆ ಅರ್ಥವೇನು.
ನಾಳೆ ಉಪಚುನಾವಣೆಯಲ್ಲೂ ನಿಖಿಲ್ ಸ್ಪರ್ಧಿಸುವುದು ನನಗೆ ಇಷ್ಟವಿರಲಿಲ್ಲ ಅಂದ್ರೆ ಏನು ಮಾಡೋಣ.
ಕುಮಾರಸ್ವಾಮಿಯವರೂ ಈ ಹಿಂದೆ ಬಹುಮತ ಬಾರದಿದ್ದರೆ, ಮತ್ತೆ ಜನರ ಬಳಿಗೆ ಹೋಗುತ್ತೇನೆ ಅಂದವರು ಸೈಲೆಂಟ್ ಆಗಿ 14 ತಿಂಗಳ ಕಾಲ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಸರ್ಕಾರ ನಡೆಸಿದ್ದನ್ನು ಜನ ಮರೆತಿಲ್ಲ.
Discussion about this post