Monday, April 19, 2021

ಕೋಟಿಗೊಬ್ಬ 3ರಲ್ಲಿ ಕಿಚ್ಚನ ಹುಡುಗರ ಎದೆಗೆ ಕಿಚ್ಚು ಹಚ್ಚಿದ ಭಟ್ರು… ಹರೆಯದ ಹಣತೆ ಬೆಳಗುತಿರಲು ಹರುಷವು ಕುಣಿತವನು ಕಲಿಸಿದೆ…..

Must read

- Advertisement -
- Advertisement -

ಕೊರೋನಾ ಮೊದಲ ಅಲೆಯ ಅಬ್ಬರ ತಗ್ಗಿದ ಬೆನ್ನಲ್ಲೇ ಚಂದನವನಕ್ಕೆ ಜೀವ ಕಳೆ ಬಂದಿತ್ತು. ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರನ್ನು ರಂಜಿಸಿದೆ.

ಕೊರೋನಾ ಎರಡನೆ ಅಲೆಯ ಭೀತಿಯನ್ನು ಮರೆತ ಜನ ಹಸಿದ ಹೆಬ್ಬುಲಿಗಳಂತೆ ಸಿನಿಮಾ ಮಂದಿರಗಳಿಗೆ ನುಗ್ಗಿ ತಮ್ಮ ದಾಹ ತಣಿಸಿಕೊಂಡಿದ್ದರು.

ಪ್ರಜ್ವಲ್ ದೇವರಾಜ್, ದರ್ಶನ್, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ಪುನೀತ್ ಹೀಗೆ ಸಾಲು ಸಾಲು ಹೀರೋಗಳ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ನೋಡಿ ಕಣ್ತುಂಬಿಸಿಕೊಂಡಿದ್ದರು. ಆದರೆ ಕಿಚ್ಚನ ಅಭಿಮಾನಿಗಳಿಗೆ ಮಾತ್ರ ಇನ್ನೂ ಆ ಭಾಗ್ಯ ಒಲಿದು ಬಂದಿಲ್ಲ. ಕೋಟಿಗೊಬ್ಬ 3 ಬಿಡುಗಡೆಯಾಗದ ಹೊರತು ಅವರಿಗೆ ನೆಮ್ಮದಿಯೂ ಇಲ್ಲ. ಈ ನಡುವೆ ಕೊರೋನಾ ಎರಡನೇ ಅಲೆ ಕೋಟಿಗೊಬ್ಬ 3 ಬಿಡುಗಡೆಗೆ ಅಡ್ಡಿಯಾಗುವ ಸಾಧ್ಯತೆಗಳಿದೆ.

ಹಾಗಂತ ಸುದೀಪ್ ತಮ್ಮ ಅಭಿಮಾನಿಗಳಿಗೆ ನಿರಾಶೆ ಮಾಡಿಲ್ಲ, ಕೋಟಿಗೊಬ್ಬ3 ಚಿತ್ರದ ಮತ್ತೊಂದು ವಿಡಿಯೋ ಸಾಂಗ್ ರಿಲೀಸ್ ಮಾಡಿದ್ದಾರೆ. ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಮೂರನೇ ಹಾಡಿನಲ್ಲಿ ಸುದೀಪ್ ಗಿಂತಲೂ ಭಟ್ರು ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದಾರೆ.

ಯೋಗರಾಜ್ ಭಟ್ ಬರೆದಿರುವ ಸಾಹಿತ್ಯ ಇದಾಗಿದ್ದು, ಅದ್ಭುತವಾಗಿ ಬರೆದಿದ್ದಾರೆ. ಸುದೀಪ್ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡೇ ಗೀಚಿದ ಸಾಲುಗಳು ಇದು ಅನ್ನುವುದರಲ್ಲಿ ಎರಡು ಮಾತಿಲ್ಲ. ಟೈಟಲ್ ಗೆ ಹೊಂದುವಂತೆ ಸಾಲುಗಳನ್ನು ಪೋಣಿಸಿರುವ ಯೋಗರಾಜ್ ಭಟ್ ಸುದೀಪ್ ಅಭಿಮಾನಿಗಳ ಮನ ಗೆದ್ದಿರೋದು ಮಾತ್ರವಲ್ಲ, ಕದ್ದಿದ್ದಾರೆ ಕೂಡಾ.

ಯಾತಕ್ಕೆ ನಿನ್ನನೇ ಬಯಸಿದೆ ಹೃದಯ.. ನಿನ್ನಲ್ಲಿ ಏನಿದೆ ಓ ಮಹಾರಾಯ, ಮಾಮೂಲಿ ಅಲ್ಲ ನೀನು ಮನದುಂಬಿ ಹೇಳುವೆನು… ನೀ ಕೋಟಿಯಲ್ಲಿ ಒಬ್ಬನೇ… ನಾ ಕಾಣಿಸುವೆ ನಿನ್ನನೇ.

ಹೀಗೆ ಪ್ರಾರಂಭವಾಗುವ ಹಾಡಿನ ಸಾಲುಗಳಿಗೆ ಜೀವ ತುಂಬಿದ ಕೀರ್ತಿ ಶ್ರೇಯಾ ಘೋಷಾಲ್ ಅವರಿಗೆ ಸಲುತ್ತದೆ. ಜೊತೆಗೆ ಹಾಡನ್ನು ಮತ್ತೆ ಮತ್ತೆ ಕೇಳಿಸಬೇಕು ಅನ್ನುವ ಸಂಗೀತವನ್ನು ಅರ್ಜುನ್ ಜನ್ಯಾ ಕೊಟ್ಟಿದ್ದಾರೆ. ಈ ಮೂಲಕ ಅರ್ಜುನ್ ಜನ್ಯ ಸಕಲಕಲಾವಲ್ಲಭ ಅನ್ನುವುದನ್ನು ಸಾಬೀತುಪಡಿಸಿದ್ದಾರೆ.

ಒಟ್ಟಿನಲ್ಲಿ ಕೋಟಿಗೊಬ್ಬ 3 ಚಿತ್ರಮಂದಿರವನ್ನು ಚಿಂದಿ ಮಾಡೋದು ಗ್ಯಾರಂಟಿ.

- Advertisement -
- Advertisement -
- Advertisement -

Latest article