ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆಯ ಭೀತಿ ಶುರುವಾಗಿದೆ.
ಸಿಎಂ ಯಡಿಯೂರಪ್ಪನವರು ಈ ಸಂಬಂಧ ತಜ್ಞರ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎರಡನೇ ಅಲೆ ತಡೆಯುವ ಬಗ್ಗೆ ಚರ್ಚಿಸಿದ್ದಾರೆ.
ಬಳಿಕ ಮಾತನಾಡಿದ ಅವರು, ಜನರು ಸ್ವತಃ ವಹಿಸಿ ಲಾಕ್ ಡೌನ್ ನೈಟ್ ಕರ್ಫ್ಯೂನಂತಹ ಕಠಿಣ ನಿರ್ಧಾರ ಕೈಗೊಳ್ಳದಂತೆ ನಡೆದುಕೊಳ್ಳಬೇಕು ಅಂದಿದ್ದಾರೆ.
ನಾವು ಕಠಿಣ ನಿಯಮ ಜಾರಿಗೊಳಿಸುವುದು ಬೇಡ ಎಂದು ಬಯಸುತ್ತೇವೆ. ಜನತೆಗೂ ಅದೇ ಬಯಕೆ ಇದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿರುವ ಸಿಎಂ ಸಭೆ, ಸಮಾರಂಭ, ಜಾತ್ರೆಗಳಲ್ಲಿ 100ರಲ್ಲಿ 80 ಭಾಗ ಮಾಸ್ಕ್ ಧರಿಸುವುದೇ ಇಲ್ಲ. ಹೀಗಾಗಿ ಪರಿಸ್ಥಿತಿ ಮರುಕಳಿಸುವಂತೆ ಮಾಡಿದೆ.
ಹೀಗಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಒಂದು ವೇಳೆ ಅದನ್ನು ಪಾಲಿಸದಿದ್ದರೆ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಅಂದಿದ್ದಾರೆ.
ಮದುವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗುಂಪುಗೂಡಬೇಡಿ. ಸಾವಿರ ಜನ ಸೇರುವ ಸಮಾರಂಭವನ್ನು ವಿಭಜಿಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದಾರೆ.

ಈ ಮಾತುಗಳನ್ನು ಕೇಳಿದ ಕೆಲವೇ ಗಂಟೆಗಳಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಅನ್ನುವುದನ್ನು ಗಾಳಿಗೆ ತೂರಲಾಗಿತ್ತು.

ನಟ ಕಿಚ್ಚ ಸುದೀಪ್ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಹುತೇಕ ವಿಐಪಿಗಳು, ಸೆಲೆಬ್ರೆಟಿಗಳು ಮಾಸ್ಕ್ ಧರಿಸಿರಲೇ ಇಲ್ಲ. ಸಿಎಂ ಒಬ್ಬರೇ ಮಾಸ್ಕ್ ಧರಿಸಿದ್ದರು ಬಿಟ್ಟರೆ ಮತ್ತೆಲ್ಲರೂ ಕೂಡಾ ಕೊರೋನಾವೇ ಇಲ್ಲ ಅನ್ನುವಂತೆ ಕೂತಿದ್ದರು.

ವೇದಿಕೆಯಲ್ಲೂ ಸಾಮಾಜಿಕ ಅಂತರವೇ ಇರಲಿಲ್ಲ. ಕನಿಷ್ಟ ಪಕ್ಷ ಜನರಲ್ಲಿ ಅರಿವು ಮೂಡಿಸುವ ಸಲುವಾಗಿಯಾದರೂ ಕುರ್ಚಿಗಳನ್ನು ದೂರ ದೂರ ಇಡಬಹುದಿತ್ತು.
ಹಾಗಾದರೆ ಕೊರೋನಾ ನಿಯಮ ಅನ್ನುವುದು ಕೇವಲ ಬಡವರಿಗೆ ಮಾತ್ರವೇ, ಬಿಬಿಎಂಪಿ ನೇಮಿಸಿರುವ ಮಾರ್ಷಲ್ ಗಳು ದಂಡ ಹಾಕೋದು ಬಡಪಾಯಿಗಳ ಮೇಲೆ ಮಾತ್ರ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ.

ಗುಂಪು ಗುಂಪಾಗಿ ಸೇರಬೇಡಿ ಎಂದು ಸಿಎಂ ಯಡಿಯೂರಪ್ಪ ಹೇಳಿದರೂ, ಸುದೀಪ್ ಅಭಿನಂದನ ಸಮಾರಂಭದಲ್ಲಿ ಸಾಮಾಜಿಕ ಅಂತರೆ ಏನು ಎಂದು ಪ್ರಶ್ನಿಸಬೇಕಾಗಿತ್ತು.
ಅಲ್ಲಿಗೆ ದೊಡ್ಡವರು ಮಾಡಿದ್ರೆ ತಪ್ಪಿಲ್ಲ, ದೊಡ್ಡವರಿಂದ ಕೊರೋನಾ ಬರೋದಿಲ್ಲ ಅಂದಾಯ್ತು.
ಇದೇ ರೀತಿ ಮಧ್ಯಮವರ್ಗದ ಮಂದಿಯೇನಾದರೂ ಕಾರ್ಯಕ್ರಮ ಆಯೋಜಿಸಿದ್ದಾರೆ ಅಧಿಕಾರಿಗಳ ಅಬ್ಬರ ಹೇಗಿರುತ್ತಿತ್ತು ಊಹಿಸಿ.

ಹೋಗ್ಲಿ ಯಡಿಯೂರಪ್ಪ ಅವರಿಗಾದ್ರೂ ಗೊತ್ತಿರಬೇಕಲ್ವ, ನಾನು ಪಾಲ್ಗೊಂಡ ಕಾರ್ಯಕ್ರಮ ಹೇಗಿರಬೇಕು ಅಂತಾ. ರಾಜ್ಯದ ದೊರೆಯೇ ಕೊರೋನಾ ನಿಯಮಗಳನ್ನು ಪಾಲಿಸಿದಿದ್ರೆ ಪ್ರಜೆಗಳು ಪಾಲಿಸುತ್ತಾರೆಯೇ..
Discussion about this post