ವೈದ್ಯರು ಮೃತಪಟ್ಟಿದ್ದಾಳೆ ಎಂದು ಘೋಷಿಸಿದ ಮಹಿಳೆಯ ಶವ ಸಂಸ್ಕಾರಕ್ಕೆಂದು ಹೊರಟಾಗ ಕಣ್ಣು ಬಿಟ್ಟಿರುವ ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಮೃತಪಟ್ಟಿದ್ದಳೆನ್ನಲಾದ ಮಹಿಳೆ ಶವ ಸಂಸ್ಕಾರಕ್ಕೆಂದು ಎತ್ತಲು ಮುಂದಾದಾಗ ಕಣ್ಣು ತೆರೆದಿದ್ದಾಳೆ. ಇದರಿಂದ ಒಂದು ಕ್ಷಣ ಸೇರಿದ್ದ ಮಂದಿ ಗಾಬರಿಯಾಗಿದ್ದಾರೆ.
ಮಂಜುನಾಥ ಕುಂಬಾರ ಅವರ ಪತ್ನಿ ಕವಿತಾ ಮಂಜುನಾಥ ಕುಂಬಾರ್ ಸಂತಾನಹರಣ ಶಸ್ತ್ರಚಿಕಿತ್ಸೆಗೆಂದು ಕೊಪ್ಪಳದ ಗೋವನಕೊಪ್ಪ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆ ನೀಡಿದ ವೈದ್ಯರು ಸೋಮವಾರ ರಾತ್ರಿ ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ವೈದ್ಯರ ಮಾತು ನಂಬಿದ ಕವಿತಾ ಕುಟುಂಬಸ್ಥರು ಆಕೆಯ ಅಂತ್ಯಸಂಸ್ಕಾರಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಆಕೆಯ ಸಂಬಂಧಿಗಳು ಶವಸಂಸ್ಕಾರಕ್ಕೆಂದು ಆಕೆಯನ್ನು ಎತ್ತಲು ಮುಂದಾದಾಗ ಕವಿತಾ ಕಣ್ಣು ಬಿಟ್ಟಿದ್ದಾರೆ.
ಕವಿತಾ ದಂಪತಿಗೆ ಈಗಾಗಲೇ ಆರು ಮಕ್ಕಳಿದ್ದು ಆಕೆ ಸಂತಾನ ಹರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಚಿಕಿತ್ಸೆಗಾಗಿ ಸಲುವಾಗಿ ವೈದ್ಯರು ಒಂದು ಲಕ್ಷದಷ್ಟು ಹಣವನ್ನು ಪಡೆದು ಆಕೆ ಸಾವನ್ನಪ್ಪಿದ್ದಾಳೆಂದು ಘೋಷಿಸಿದ್ದರು
ಇದೀಗ ಕವಿತಾ ಪತಿ, ಸಂಬಂಧಿಗಳು ಆಸ್ಪತ್ರೆ ಎದುರು ನೆರೆದು ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಆಸ್ಪತ್ರೆ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
Discussion about this post