Saturday, February 27, 2021

ಒಂದೇ ಒಂದು ವಿದ್ಯಾರ್ಥಿನಿಗಾಗಿ ಮತ್ತೆ ಶಾಲೆ ತೆರೆದ ಸರ್ಕಾರ

Must read

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಒಬೆನಹಳ್ಳಿಯಲ್ಲಿ 1978ರ ಹೊತ್ತಿಗೆ ನಿರ್ಮಾಣ ಗೊಂಡ ಸರ್ಕಾರಿ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದರು. ಆಗೆಲ್ಲಾ ಖಾಸಗಿ ಶಾಲೆಗಳ ದರ್ಬಾರು ಶುರುವಾಗಿರಲಿಲ್ಲ. 2010ರಲ್ಲೂ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾಕಷ್ಟಿತ್ತು. ಆದರೆ ಸುತ್ತ ಮುತ್ತ ಖಾಸಗಿ ಶಾಲೆಗಳು ಹೆಚ್ಚಾಗುತ್ತಿದ್ದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು.

ಆರ್’ಟಿಇ ಕಾಯ್ದೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯ್ತು ಎಂದು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ದೂಷಿಸಿದರು

2016-17 ಶಾಲೆಯಲ್ಲಿ ಹಾಜರಾತಿಯೇ ಇರಲಿಲ್ಲ. ಕೊನೆಗೆ ಮಕ್ಕಳ ಕೊರತೆಯಿಂದಾಗಿ ಶಾಲೆ ಮುಚ್ಚಿ ಹೋಯ್ತು.

ಈ ವೇಳೆ 11 ವರ್ಷದ ನಂದಿತಾ ಎಂಬ ಬಾಲಕಿಯ ಪೋಷಕರು ತೀವ್ರ ಆಘಾತಕ್ಕೊಳಗಾಗಿದ್ದರು. ಕೂಲಿ ಕಾರ್ಮಿಕರಾಗಿದ್ದ ನಂದಿತಾ ಪೋಷಕರು ಮಗಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸುವ ಕನಸು ಹೊಂದಿದ್ದರು. ಶಾಲೆ ಮುಚ್ಚಿ ಹೋದ ಕಾರಣ,ಬೇರೆ ಶಾಲೆಗೆ ಹೋಗಬೇಕಾದರೆ ಬಹಳ ದೂರ ಹೋಗಬೇಕಿತ್ತು. ಮಾತ್ರವಲ್ಲದೆ ಇತ್ತೀಚನ ಕೆಲ ಅಘಾತಕಾರಿ ಬೆಳವಣಿಗೆಯಿಂದ ನಂದಿತಾ ಭದ್ರತೆ ಬಗ್ಗೆ ಕೂಡ ಮುಖ್ಯವಾಗಿತ್ತು.

ಹೀಗಾಗಿ ಒಂದಿಷ್ಟು ತಿಳುವಳಿಕೆ ಉಳ್ಳವರನ್ನು ಸಂಪರ್ಕಿಸಿದ ಪೋಷಕರು ತಮ್ಮ ಆತಂಕವನ್ನು ಹೊರ ಹಾಕಿದರು. ಶಾಲೆ ಮರು ತೆರೆಯುವಂತೆ ಮಾಡಲು ನಂದಿತಾ ಪೋಷಕರು ಹಿಡಿದ ಪಟ್ಟು ಅರ್ಥ ಮಾಡಿಕೊಂಡ ಗ್ರಾಮಸ್ಥರು ಕೂಡಾ ಹೋರಾಟಕ್ಕೆ ಕೈ ಜೋಡಿಸಿದರು.

ಈ ಹೋರಾಟದಲ್ಲಿ ಸರ್ಕಾರದ ಕಣ್ಣು ತೆರೆಸುವಲ್ಲಿ ಯಶಸ್ವಿಯಾಯ್ತು.

ಇದೀಗ 2017-18ನೇ ಶೈಕ್ಷಿಣಿಕ ವರ್ಷದಲ್ಲಿ ಶಾಲೆಯನ್ನು ಮತ್ತೆ ತೆರೆಯಲಾಗಿದ್ದು, ಶಾಲೆಯಲ್ಲಿ ಇದೀಗ ನಂದಿತಾ ಒಬ್ಬಳೇ ವಿದ್ಯಾರ್ಥಿ ಇದ್ದಾಳೆ. ಈಕೆಗಾಗಿ ಸರ್ಕಾರ ಕೋಮಲಾ ಜಿ.ಕೆ ಅನ್ನುವ ಓರ್ವ ಮಹಿಳಾ ಶಿಕ್ಷಕಿಯನ್ನು ಕೂಡ ನೇಮಕ ಮಾಡಿದೆ. ಜೊತೆಗೆ ಬಾಲಕಿಗೆ ಮಧ್ಯಾಹ್ನದ ಬಿಸಿಯೂಟವೂ ಸಿಗುತ್ತಿದೆ.

- Advertisement -
- Advertisement -

Latest article