ಬೆಂಗಳೂರು : ಕಾರ್ತಿಕ ಮಾಸದವರೆಗೂ ವಿಶ್ವವವನ್ನು ವಿಪತ್ತು ಕಾಡಲಿದೆ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ. ಗೌರಿ ಹಬ್ಬದಂದು ಮಾಡಾಳು ಗ್ರಾಮದಲ್ಲಿ ಮಾತನಾಡಿದ ಅವರು ಗೌರಿ ಹಬ್ಬದ ದಿನವೇ ಭಯಂಕರ ಭವಿಷ್ಯ ಹೇಳಿದ್ದಾರೆ.
ಮತ್ತೆ ವಿಪತ್ತು ಕಾದಿದೆ ಅಂದಿರುವ ಶ್ರೀಗಳು, ದೇಶದಲ್ಲಿ ಇನ್ನೂ ಮಳೆಯಾಗಲಿದೆ ಹೀಗಾಗಿ ಆಪತ್ತು ಕಾಡಲಿದೆ ಅಂದಿದ್ದಾರೆ. ಇನ್ನು ಕೊರೋನಾ ಕುರಿತಂತೆ ಮಾತನಾಡಿರುವ ಶ್ರೀಗಳು ಕೊರೋನಾ ಸದ್ಯಕ್ಕೆ ಮುಗಿಯುವುದಿಲ್ಲ. 2 ರಿಂದ 3 ವರ್ಷ ಕೊರೋನಾ ಹೊಸ ರೂಪ ತಾಳಲಿದೆ ಅಂದಿದ್ದಾರೆ.
ಭೂಮಿ ನಡುಗಲಿದೆ ಎಂದು ಭೂಕಂಪದ ಬಗ್ಗೆ ಮುನ್ಸೂಚನೆ ಕೊಟ್ಟಿರುವ ಶ್ರೀಗಳು, ಇದು ಕೇವಲ ದೇಶ ಮಾತ್ರವಲ್ಲ ಇಡೀ ವಿಶ್ವಕ್ಕೆ ಅನ್ವಯ ಅಂದಿದ್ದಾರೆ. ಹಾಗಾದ್ರೆ ಸಂಕಷ್ಟಗಳಿಗೆಲ್ಲಾ ಯಾವಾಗ ಮುಕ್ತಿ ಅಂದ್ರೆ ಕಾರ್ತಿಕ ಮಾಸದವರೆಗೂ ಕಾಯಲೇಬೇಕು ಎಂದು ಹೇಳಿದ್ದಾರೆ.
Discussion about this post