ದುಬೈ : ಬೇರೆಯವರ ಸಿನಿಮಾ ರಕ್ಷಿಸುವಷ್ಚು ದೊಡ್ಡ ವ್ಯಕ್ತಿ ನಾನಲ್ಲ. ಇನ್ನೊಬ್ಬರ ಸಿನಿಮಾ ಹ್ಯಾಂಡಲ್ ಮಾಡುವಷ್ಟು ದೊಡ್ಡವ ನಾನಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ರಾಬರ್ಟ್ ಸಿನಿಮಾ ವಿವಾದ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನೇನು ಹೇಳಲಿ ರಾಬರ್ಟ್ ಬಗ್ಗೆ ನನ್ನ ಸಿನಿಮಾ ಕಾಪಾಡಿಕೊಳ್ಳುವುದು ನನಗೆ ಗೊತ್ತಿದೆ. ಅವರ ಸಿನಿಮಾ ಕಾಪಾಡಿರೊಳ್ಳುವುದು ಅವರಿಗೆ ಗೊತ್ತಿರುತ್ತದೆ ಅಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರಾಬರ್ಟ್ ಸಿನಿಮಾಗೆ ತೆಲುಗಿನಲ್ಲಿ ಬಿಡುಗಡೆಗೆ ಅಡ್ಡಿ ಎದುರಾಗಿರುವ ಕುರಿತು ದರ್ಶನ್ ಸಿಡಿದೆದ್ದಿದ್ದರು. ಮಾತ್ರವಲ್ಲದೆ ನಮ್ಮವರಿಗೆ ಪರಭಾಷಾ ವ್ಯಾಮೋಹ, ನಮ್ಮಲ್ಲಿರುವವರು ಕನ್ನಡ ಅಭಿಮಾನ ಬೆಳೆಸಿಕೊಳ್ಳಬೇಕು,ಅವರು ಕನ್ನ ಮಾತನಾಡುತ್ತಾರೆಯೇ…ತಮಿಳು ಪ್ರೇಮ ಜಾಸ್ತಿ ಅವರಿಗೆ ಎಂದೆಲ್ಲಾ ಟೀಕಾ ಪ್ರಹಾರ ಮಾಡಿದ್ದರು.
ಆದರೆ ವಿಷಯವನ್ನು ಕೂಲ್ ಆಗಿ ಸ್ವೀಕರಿಸುವ ಕಿಚ್ಚ ಸುದೀಪ್ ಕೂಲ್ ಆಗಿ ಪ್ರತಿಕ್ರಿಯಿಸುವ ಮೂಲಕ ವಿಷಯಕ್ಕೆ ಬೆಂಕಿ ಹಾಕಲು ಕಾಯುತ್ತಿದ್ದವರಿಗೆ ನಿರಾಶೆ ಮೂಡಿಸಿದ್ದಾರೆ.