ಬೆಂಗಳೂರು : KGF 1ರ ನಂತ್ರ ಸಾಕಷ್ಟು ನಿರೀಕ್ಷೆ ಮೂಡಿಸಿರುವ KGF 2 ಬಿಡುಗಡೆ ಯಾವಾಗ ಅನ್ನುವ ಕುತೂಹಲ ಎಲ್ಲರಲ್ಲಿದೆ. ಈ ಹಿಂದೆ ಈ ಚಿತ್ರ ಥಿಯೇಟರ್ ಗೆ ಬರೋದೇ ಇಲ್ಲ, OTTಯಲ್ಲಿ ಮಾತ್ರ ಬಿಡುಗಡೆಯಾಗಲಿದೆ ಅನ್ನುವ ಸುದ್ದಿ ಹರಿದಾಡಿತ್ತು. ಜೊತೆಗೆ ಇದಕ್ಕೆ ಸಾಕ್ಷಿ ಅನ್ನುವಂತೆ ZEE ಸಂಸ್ಥೆ ಜೊತೆಗೆ ದೊಡ್ಡ ಮೊತ್ತಕ್ಕೆ ಟಿವಿ ರೈಟ್ಸ್ ಗಳನ್ನು ಕೂಡಾ ಮಾರಾಟ ಮಾಡಲಾಗಿತ್ತು.
ಆದರೆ ಇದೀಗ ಕೆಜಿಎಫ್ 2 ಚಿತ್ರಮಂದಿರಕ್ಕೆ ಬರುವುದು ಖಚಿತವಾಗಿದ್ದು, ಮುಂದಿನ ವರ್ಷ ಎಪ್ರಿಲ್ 14 ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಬಗ್ಗೆ ಯಶ್ ಅವರೇ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಕೊರೋನಾ ಸೋಂಕಿನ ಮೂರನೇ ಅಲೆಯ ಭೀತಿಯಲ್ಲಿ ಭಾರತವಿದೆ. ಮುಂದಿನ ವರ್ಷದ ಏಪ್ರಿಲ್ ಹೊತ್ತಿಗೆ ಕೊರೋನಾ ಆತಂಕ ಮರೆಯಾಗುವ ನಂಬಿಕೆ ಚಿತ್ರತಂಡದ್ದು. ದೇಶವಾಸಿಗಳಿಗೆಲ್ಲಾ ಕೊರೋನಾ ಲಸಿಕೆ ಹಾಕಿಸಿಯಾಗಿರುತ್ತದೆ, ಹೀಗಾಗಿ ಕೊರೋನಾ ಸೋಂಕು ದೂರವಾಗಿರುತ್ತದೆ ಅನ್ನುವ ವಿಶ್ವಾಸ ಟೀಂನಲ್ಲಿದೆ. ಹಾಗೇ ಆಗ್ಲಿ ಅನ್ನುವುದು ಕೂಡಾ ಎಲ್ಲರ ಆಶಯ.
Discussion about this post