ನಟಿ ಕಾವ್ಯಶಾಸ್ತ್ರಿ ಕ್ಯಾನ್ಸರ್ ರೋಗಿಗಳಿಗಾಗಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವು ತಾವು ಕೂದಲು ದಾನ ಮಾಡುತ್ತಿರುವುದಕ್ಕೆ ಕಾರಣ ಕೂಡಾ ಕೊಟ್ಟಿದ್ದಾರೆ.
ಇದನ್ನೂ ಓದಿ : ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ ಮಾಡಿದ ಗಾಯಕಿ ಅಖಿಲಾ ಪಜಿಮಣ್ಣು
“ಕ್ಯಾನ್ಸರ್ ರೋಗಿಗಳಿಗೆ ನಾನು ಕೂದಲು ದಾನ ಮಾಡಿದ್ದೇನೆ, ಕ್ಯಾನ್ಸರ್ನಿಂದಾಗಿ ನಾನು ನನ್ನ ಚಿಕ್ಕಪ್ಪನನ್ನು ಕಳೆದುಕೊಂಡಿದ್ದೆ. ಆ ನೋವನ್ನು ಹತ್ತಿರದಿಂದ ಕಂಡಿದ್ದೇನೆ. ಹೀಗಾಗಿ, ಈ ನಿರ್ಧಾರಕ್ಕೆ ಬಂದಿದ್ದೇನೆ. ಕೂದಲು ದಾನ ಸಣ್ಣ ಕೆಲಸವೇ ಇರಬಹುದು. ಆದರೆ, ಒಳ್ಳೇ ಕೆಲಸಕ್ಕೆ ನೀವು ಸಹ ಕೈಜೋಡಿಸಿ” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಮನೆಯಲ್ಲಿ ಬಯಲಾಯ್ತು ರಾಜೀವನ ಹೇರ್ ಸ್ಟೈಲ್ ರಹಸ್ಯ – ಕಿಚ್ಚ ಕೊಟ್ರು ಸ್ಪೆಷಲ್ ಗಿಫ್ಟ್
ಈ ಹಿಂದೆ ನಟಿ ಶ್ವೇತಾ ಪ್ರಸಾದ್, ಕಾರುಣ್ಯ ರಾಮ್, ಗಾಯಕಿ ಅಖಿಲಾ ಪಜಿಮಣ್ಣು ಕೂದಲು ದಾನ ಮಾಡಿದ್ದರು.
Discussion about this post