ಡಿಎಂಕೆ ಪರಮೋಚ್ಚ ನಾಯಕ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಪಾರ್ಥಿವ ಶರೀರಕ್ಕೆ ಯಾವುದೇ ವಿಧಿ, ವಿಧಾನ ನಡೆಯಲಿಲ್ಲ. ಕೇವಲ ಮೌನ ಆಚರಣೆ ಮೂಲಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆದಿದೆ.
ಶ್ರೀಗಂಧದ ಮರದಿಂದ ವಿಶೇಷವಾಗಿ ಶವ ಪೆಟ್ಟಿಗೆಯಲ್ಲಿ ಕರುಣಾನಿಧಿ ಅವರೇ ಸುಮಾರು 30 ವರ್ಷಗಳ ಹಿಂದೆ ಬರೆದಿದ್ದ ‘ವಿಶ್ರಾಂತಿ ಇಲ್ಲದೆ ದುಡಿಯುವವನಿಗೆ ಇದು ವಿಶ್ರಾಂತಿಯ ತಾಣ ಎಂದು ಬರೆದಿದ್ದ. ಅದೇ ಸಾಲನ್ನು ಪೆಟ್ಟಿಗೆ ಮೇಲೆ ಕೆತ್ತಿಸಲಾಗಿತ್ತು.
ಹೈಕೋರ್ಟ್ ಆದೇಶ ಹಿನ್ನಲೆಯಲ್ಲಿ ಮರೀನಾ ಬೀಚ್ ನಲ್ಲಿ ಗುರು ಅಣ್ಣಾದೊರೈ ಸಮಾಧಿ ಸಮೀಪವೇ ಎಂ.ಕರುಣಾನಿಧಿ ಅವರ ಸಮಾಧಿ ಮಾಡಲಾಗಿದ್ದು, ಕರುಣಾನಿಧಿ ಕುಟುಂಬಸ್ಥರು, ಸೇನಾಪಡೆಗಳು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.ಆದರೆ ಮಾಜಿ ಸಿಎಂ ಕರುಣಾನಿಧಿ ಅವರ ಅಂತ್ಯಸಂಸ್ಕಾರದ ವೇಳೆ ತಮಿಳುನಾಡು ಹಾಲಿ ಸಿಎಂ ಪಳನಿಸ್ವಾಮಿ ಗೈರುಹಾಜರಾಗಿದ್ದರು.
ರಾಜ್ಯದ ಮುಖ್ಯಮಂತ್ರಿಯಾಗಿ ರಾಜಕೀಯ ದ್ವೇಷ ಮರೆತು ಅವರು ಬರಬೇಕಾಗಿತ್ತು ಆದರೆ ಬರಲೇ ಇಲ್ಲ.