ಇಷ್ಟು ದಿನಗಳ ಕಾಲ ಒಲಾದಲ್ಲಿ ಶೇರ್ ಟ್ಯಾಕ್ಸಿ ಹಾಗೂ ಉಬರ್ ಕಂಪನಿಯ ಕಾರ್ ಪೂಲಿಂಗ್ ಸೇವೆಯನ್ನು ಎಂಜಾಯ್ ಮಾಡುತ್ತಿದ್ದ ಪ್ರಯಾಣಿಕರಿಗೆ ಕರ್ನಾಟಕ ಸಾರಿಗೆ ಇಲಾಖೆ ಶಾಕ್ ಕೊಟ್ಟಿದೆ.
ಈ ಸಂಬಂಧ ಕಟ್ಟು ನಿಟ್ಟಿನ ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ ಓಲಾ ಕಂಪನಿ ಪರಿಚಯಿಸಿರುವ ಶೇರ್ ಟ್ಯಾಕ್ಸಿ ಹಾಗೂ ಉಬರ್ ಕಂಪನಿಯ ಕಾರ್ ಪೂಲಿಂಗ್ ಸೇವೆಯನ್ನು ತಕ್ಷಣದಿಂದ ನಿಷೇಧಿಸಿದೆ. ಓಲಾ ಹಾಗೂ ಉಬರ್ ನಿಷೇಧಿತ ಸೇವೆಯನ್ನು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ವಿಪಿ ಇಕ್ಕೇರಿ ಎಚ್ಚರಿಕೆ ನೀಡಿದ್ದಾರೆ.
ಹಾಗಾದ್ರೆ ಟ್ರಾಫಿಕ್ ಜಾಮ್ ಗೆ ಪರಿಹಾರದಂತಿರುವ ಕಾರ್ ಪೂಲಿಂಗ್ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ವಿರೋಧಿಸುತ್ತಿದೆಯೇ. ಖಂಡಿತಾ ಇಲ್ಲ ಅಂದಿದ್ದಾರೆ ಆಯುಕ್ತರು. ಕಾರ್ ಪೂಲಿಂಗ್ ನಾವು ವಿರೋಧಿಸುತ್ತಿಲ್ಲ. ಆದರೆ ಓಲಾ ಹಾಗೂ ಉಬರ್ ಕಾರ್ ಪೂಲಿಂಗ್ ಸೇವೆಗೆ ಅನುಮತಿ ಪಡೆದಿಲ್ಲ. ಕೇವಲ ಟ್ಯಾಕ್ಸಿ ಸೇವೆಗೆ ಮಾತ್ರ ಅನುಮತಿ ಪಡೆದಿದೆ. ಹೀಗಾಗಿ ಓಲಾ ಹಾಗೂ ಉಬರ್ ಕಂಪನಿಯ ಕಾರ್ ಪೂಲಿಂಗ್ ಸೇವೆಯನ್ನು ನಿಷೇಧಿಸಲಾಗಿದೆ.ಓಲಾ ಹಾಗೂ ಉಬರ್ ಕಂಪನಿಯ ಟ್ಯಾಕ್ಸಿ ಸೇವೆ ಹಾಗೇ ಇರಲಿದೆಯಂತೆ.
Discussion about this post