ಮಂಗಳೂರು : ಕರಾವಳಿಯ ಅಡಿಕೆ ಬೆಳೆಗಾರರು ಇದೀಗ ಫುಲ್ ಖುಷ್ ಆಗಿದ್ದಾರೆ. ಈ ಹಿಂದಿನ ವರ್ಷದಲ್ಲಿ ಆಗಿರುವ ನಷ್ಟವನ್ನು ಈ ಬಾರಿ ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ. ಹೊಸ ಚಾಲಿ ಅಡಿಕೆ ದರ ಮತ್ತೆ ನಾಗಲೋಟ ಮುಂದುವರಿಸಿದ್ದು, ಗುರುವಾರ ಖಾಸಗಿ ಮಾರುಕಟ್ಟೆಯಲ್ಲಿ 505 ರೂಪಾಯಿಗೆ ಖರೀದಿಯಾಗಿದೆ. ಆಗಸ್ಟ್ ತಿಂಗಳಲ್ಲಿ ಖಾಸಗಿಯವರು 465 ರೂ. ನಿಂದ 470 ರೂ. ವರೆಗೆ ಅಡಿಕೆ ಖರೀದಿಸಿದ್ದರು. ಕ್ಯಾಂಪ್ಕೊ ಸಹಕಾರ ಸಂಸ್ಥೆ 460 ರೂಪಾಯಿಗೆ ಅಡಿಕೆಯನ್ನು ಬೆಳೆಗಾರರಿಂದ ಖರೀದಿಸಿದ್ದು.
ಜುಲೈ ಮೊದಲ ವಾರದಲ್ಲಿ ಹೊಸ ಅಡಿಕೆ ದರ 420 ರೂಪಾಯಿ ಸುತ್ತಮುತ್ತವಿತ್ತು. ಜುಲೈ ಅಂತ್ಯಕ್ಕೆ ಇದು 450ಕ್ಕೆ ಏರಿತು. ಆಗಸ್ಟ್ ತಿಂಗಳಲ್ಲಿ 470ರ ಗಡಿ ದಾಟಿತ್ತು. ಇದೀಗ ಸಪ್ಟಂಬರ್ ಮಧ್ಯ ಭಾಗದಲ್ಲಿ 500ರ ಗಡಿ ದಾಟಿದ್ದು ಮತ್ತೆ ದರ ಏರಲಾರಂಭಿಸಿದೆ.
ಅಡಿಕೆ ಮಾರುಕಟ್ಟೆ ಇತಿಹಾಸದಲ್ಲೇ ಇದೊಂದು ದಾಖಲೆ ಧಾರಣೆಯಾಗಿದ್ದು, ಉತ್ತರ ಭಾರತದಲ್ಲಿ ಅಡಿಕೆಗೆ ಹೆಚ್ಚುತ್ತಿರುವ ಬೇಡಿಕೆ ಹಾಗೂ ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ಅಡಿಕೆ ಬಾರದಿರುವ ಕಾರಣ ಬೆಳೆ ಏರಿಕೆಯಾಗಿದೆ ಎನ್ನಲಾಗಿದೆ. ಒಂದು ವೇಳೆ ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ಅಡಿಕೆ ಬಂದ್ರೆ ಕರಾವಳಿಯ ಅಡಿಕೆ ಬೆಳೆಗಾರರು ಮತ್ತೆ ಹಳೆಯ ದರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ.
Arecanut growers have reason to cheer with prices going up and growers who have stock getting good money. Farmers, who are yet to harvest the yield, are hopeful that the current prices will continue for a few more days.
Discussion about this post