ಬೆಂಗಳೂರು : ಕೊನೆಗೂ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ. ಆದರೆ ಅನುಮತಿ ನೀಡುವ ಸಂದರ್ಭದಲ್ಲಿ ವಿಧಿಸಿರುವ ಷರತ್ತುಗಳನ್ನು ನೋಡಿದ ಆಸ್ತಿಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಹಿಂದೆ ಬಿಜೆಪಿಯ ಸಂಸದರು ಜನಾಶೀರ್ವಾದ ಯಾತ್ರೆ ಮಾಡಿದ ವೇಳ ಕೊರೋನಾ ಅಬ್ಬರಿಸುತ್ತಿತ್ತು. ಪಾಸಿಟಿವಿಟಿ ದರ ಶೇ2 ಕ್ಕಿಂತ ಮೇಲಿತ್ತು. ಆಗ ಸಾಮಾಜಿಕ ಅಂತರ ಮರೆತ ಜನ, ಜನಪ್ರತಿನಿಧಿಗಳು ಬೆರೆತಿದ್ದರು. ಮೊನ್ನೆ ಮೊನ್ನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಗಳ ಮದುವೆ ನಡೆಯಿತು. ಈ ವೇಳೆ ಕೊರೋನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಯಾರೊಬ್ಬರೂ ಕ್ಯಾತೆ ತೆಗೆಯಲಿಲ್ಲ. ಒಂದೇ ಒಂದು ಪ್ರಕರಣವೂ ದಾಖಲಾಗಲಿಲ್ಲ. ಕೊರೋನಾ ನಿಯಂತ್ರಣಕ್ಕಾಗಿ ಇರುವ ತಜ್ಞರ ತಂಡವು ವಿರೋಧ ವ್ಯಕ್ತಪಡಿಸಲಿಲ್ಲ.
ಈಗ ಗಣೇಶೋತ್ಸವಕ್ಕೆ ಅನುಮತಿ ಕೊಡಿ ಅಂದ್ರೆ ಸರ್ಕಾರ ಮೀನಾ ಮೇಷ ಎಣಿಸಿತ್ತು. ಕನಿಷ್ಟ, ವಿಗ್ರಹ ತಯಾರಕರ ಸಂಕಷ್ಟವೂ ಸರ್ಕಾರಕ್ಕೆ ಕಾಣಿಸಲಿಲ್ಲ. ಇದೀಗ ಹಬ್ಬಕ್ಕೆ ನಾಲ್ಕು ದಿನವಿದೆ ಅನ್ನುವಾಗ ಹಬ್ಬ ಆಚರಿಸಲು ಸರ್ಕಾರ ಅನುಮತಿ ಕೊಟ್ಟಿದೆ. ಆದರೆ ವಿಧಿಸಿರುವ ಷರತ್ತುಗಳನ್ನು ಗಮನಿಸಿದರೆ ಹಬ್ಬ ಆಚರಿಸದೇ ಇರುವುದೇ ಬೆಟರ್.
ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿ ಕೊಡುತ್ತೇವೆ ಅಂದಿರುವ ಸರ್ಕಾರ, 5 ದಿನಗಳ ಕಾಲ ಗಣೇಶನನ್ನು ಕೂರಿಸಲು ಅನುಮತಿ ನೀಡಿದೆ. ನಗರ ಪ್ರದೇಶದಲ್ಲಿ ವಾರ್ಡ್ ಕ್ಕೆ ಒಂದು ಗಣೇಶನನ್ನು ಕೂರಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯಾಡಳಿತದ ಅನುಮತಿಯ ಮೇರೆ ಸಂಖ್ಯೆ ಅನ್ವಯವಾಗುತ್ತದೆ.
ಗಣೇಶೋತ್ಸವದಂದು ಯಾವುದೇ ಕಾರಣಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಹಾಗಿಲ್ಲ, ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಮೆರವಣಿಗೆ ನಡೆಸುವಂತಿಲ್ಲ. ವಿಸರ್ಜನೆ ಸಂದರ್ಭದಲ್ಲಿ ವಾದ್ಯಗಳನ್ನು ಬಳಸುವಂತಿಲ್ಲ ಅಂದಿದೆ. ಇನ್ನು ಗಣೇಶನನ್ನು ಕೂರಿಸುವ ಸಂದರ್ಭದಲ್ಲಿ 50X50 ಪೆಂಡಾಲ್ ಮಾತ್ರ ಹಾಕಬಹುದಾಗಿದೆ. ಶಾಲಾ ಕಾಲೇಜುಗಳಲ್ಲಿ ಗಣೇಶ ಕೂರಿಸುವಂತಿಲ್ಲ, ಪಾಸಿಟಿವಿಟಿ ದರ ಶೇ2 ಕ್ಕಿಂತ ಹೆಚ್ಚು ಇದ್ರೆ ಗಣೇಶೋತ್ಸವಕ್ಕೆ ಅನುಮತಿಯೇ ಇರೋದಿಲ್ಲ.
ಇವಿಷ್ಟು ಈಗ ಸಿಕ್ಕಿರುವ ಮೊದಲ ಹಂತದ ಷರತ್ತುಗಳು, ನಾಳೆ ಬೆಳಗ್ಗೆ ಈ ಸಂಬಂಧ ಅಧಿಕೃತ ಸುತ್ತೋಲೆ ಹೊರ ಬೀಳಲಿದ್ದು, ಮತ್ತಷ್ಟು ಕಠಿಣ ನಿಯಮಗಳು ಇದರಲ್ಲಿ ಇರುವ ಸಾಧ್ಯತೆಗಳಿದೆ.
ಹಾಗಾದ್ರೆ ನಿಯಮಗಳನ್ನು ಮಾಡಬಾರದೇ, ಖಂಡಿತಾ ಮಾಡಬೇಕು. ಹೀಗೆ ನಿಯಮಗಳನ್ನು ಸಡಿಲಿಕೆ ಮಾಡಿದ ಕರ್ಮಕ್ಕೆ ಕೇರಳದಲ್ಲಿ ಏನಾಗಿದೆ ಅನ್ನುವುದನ್ನು ನೋಡಿದ್ದೇವೆ. ದಿನಕ್ಕೆ 30 ಸಾವಿರ ಪ್ರಕರಣಗಳು ವರದಿಯಾಗುತ್ತಿದೆ. ಹಾಗಂತ ನಿಯಮಗಳನ್ನು ಮಾಡುವ ಸಂದರ್ಭದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಸುಣ್ಣ ಯಾಕೆ ಅನ್ನುವುದು ಪ್ರಶ್ನೆ.
The Karnataka government has decided on Covid safety protocols to be followed during the upcoming five-day Ganesh Chaturthi festivities. As per a new order, only a maximum of 20 people will be allowed for the celebrations and immersion of the Ganesha idol. In addition to this, no celebrations will be allowed after 9 pm.
Discussion about this post