ಮಂಗಳೂರು : ಗಣೇಶೋತ್ಸವಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಸರ್ಕಾರದ ನಾಟಕಕ್ಕೆ ಕೊನೆಗೂ ತೆರೆ ಬಿದ್ದಿದೆ. ಹಬ್ಬದ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ಸರ್ಕಾರ ಯಾವತ್ತೋ ತಿಳಿಸಬೇಕಿತ್ತು. ಹಬ್ಬಕ್ಕೆ ನಾಲ್ಕು ದಿನ ಇದೆ ಅನ್ನುವಾಗ ಹತ್ತು ಹಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ.
ಬಿಜೆಪಿ ನಾಯಕರ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ಅದ್ಯಾವ ತಜ್ಞರ ಸಮಿತಿಯ ಸಭೆ ಕರೆಯಲಿಲ್ಲ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅದ್ಯಾವ ಸಚಿವರು ಸಿಎಂ ಬಳಿ ದೂರು ಕೊಡಲಿಲ್ಲ. ಆದರೆ ಗಣೇಶೋತ್ಸವ ಸಂದರ್ಭದಲ್ಲಿ ರಾಜ್ಯದ ಜನರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಸಿಕ್ಕಾಪಟ್ಟೆ ಕಾಳಜಿ ವ್ಯಕ್ತವಾಗಿದೆ.
ಈ ನಡುವೆ ದಕ್ಷಿಣ ಕನ್ನಡ, ಉಡುಪಿ, ಮೈಸೂರು ಮತ್ತು ಚಾಮರಾಜನಗರದಲ್ಲಿ ಗಣೇಶೋತ್ಸವಕ್ಕೆ ಅನುಮತಿ ಸಿಗುವುದು ಅನುಮಾನ ಎನ್ನಲಾಗಿದೆ. ಕೇರಳದಲ್ಲಿ ಕೊರೋನಾ ಅಬ್ಬರಿಸುತ್ತಿರುವ ಕಾರಣ ಈ ಭಾಗದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸುವ ಸಾಧ್ಯತೆಗಳಿದೆಯಂತೆ. ಆದರೆ ಈ ಬಗ್ಗೆ ಸರ್ಕಾರ ಅಧಿಕೃವಾಗಿ ಏನೂ ಹೇಳಿಲ್ಲ. ಮೂಲಗಳ ಪ್ರಕಾರ ಕೇರಳದ ಗಡಿ ಜಿಲೆಯಲ್ಲಿ ಮಾತ್ರ ಕಠಿಣ ಕ್ರಮಗಳು ಜಾರಿಯಲ್ಲಿರುತ್ತದೆ. ಜೊತೆಗೆ ಇಲ್ಲಿ ವಿಕೇಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಗಣೇಶನ ಹಬ್ಬಕ್ಕೆ ಅನುಮತಿ ಅನುಮಾನ ಎನ್ನಲಾಗಿದೆ. ಆದರೆ ಮಹಾರಾಷ್ಟ್ರ ಗಡಿಗೆ ಹೊಂದಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ. ಈ ಭಾಗದಲ್ಲಿ ಅದ್ದೂರಿಯಾಗಿ ಹಬ್ಬ ನೆರವೇರುವ ಸಾಧ್ಯತೆಗಳಿದೆ. ಈಗಾಗಲೇ ಯತ್ನಾಳ್ ಸೇರಿದಂತೆ ಅನೇಕ ಬಿಜೆಪಿ ನಾಯಕರೇ ರಾಜ್ಯ ಸರ್ಕಾರ ವಿರುದ್ಧ ಗಣೇಶೋತ್ಸವದ ವಿಷಯದಲ್ಲಿ ತೊಡೆ ತಟ್ಟಿದ್ದಾರೆ. ಕರಾವಳಿ ಭಾಗದ ಜನಪ್ರತಿನಿಧಿಗಳು ಜನರಿಗಾಗಿ ಎಲ್ಲಿ ಮಾತನಾಡುತ್ತಾರೆ. ನಾಯಕರು ಹಾಕಿದ ಗೆರೆಯನ್ನು ದಾಟುವುದಿಲ್ಲ ಬಿಡಿ.
ಇನ್ನು ಕರಾವಳಿಯಲ್ಲಿ ಪಾಸಿಟಿವಿಟಿ ದರ ಕೂಡಾ ಶೇ 2ಕ್ಕಿಂತ ಹೆಚ್ಚಿದೆ. ಸರ್ಕಾರದ ಸುತ್ತೋಲೆ ಪ್ರಕಾರ ಪಾಸಿಟಿವಿಟಿ ರೇಟ್ ಹೆಚ್ಚಿರುವ ಕಡೆ ಗಣೇಶೋತ್ಸವ ಮರೆತು ಬಿಡಬೇಕು.2
Discussion about this post