ಬೆಂಗಳೂರು : ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇನ್ನು ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿಗೆ ತಲುಪಿರುವ ವಿಕೃತಕಾಮಿ ಉಮೇಶ್ ರೆಡ್ಡಿಗೆ ಸುಪ್ರೀಂಕೋರ್ಟ್ ಕೊನೆಯ ಆಶಾವಾದ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಸರ್ವೋಚ್ಛ ನ್ಯಾಯಾಲಯ ಉಮೇಶ್ ರೆಡ್ಡಿ ಮನವಿಯನ್ನು ಪುರಸ್ಕರಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ಹೈಕೋರ್ಟ್ ಎಂದು ಘೋಷಿಸಿರುವ ಗಲ್ಲು ಶಿಕ್ಷೆಯೇ ಶಾಶ್ವತವಾಗಲಿದೆ ಅನ್ನುವುದು ಕಾನೂನು ತಜ್ಞರ ಅಭಿಪ್ರಾಯ.
ಯಾರಿವನು ಉಮೇಶ್ ರೆಡ್ಡಿ..?
ಇತ್ತೀಚಿನ ವರ್ಷಗಳಲ್ಲಿ ಉಮೇಶ್ ರೆಡ್ಡಿ ಹೆಸರು ಕೇಳಿದವರಿಗೆ, ಅವನೊಬ್ಬ ಪೊಲೀಸ್ ಕಾನ್ ಸ್ಟೇಬಲ್ ಅನ್ನುವುದು ಗೊತ್ತಿರಲಿಕ್ಕಿಲ್ಲ. ಹೌದು ಚಿತ್ರದುರ್ಗ ಮೂಲದ ಉಮೇಶ್ ರೆಡ್ಡಿ 1995ರಲ್ಲಿ ಪಿಯುಸಿ ಶಿಕ್ಷಣ ಮುಗಿಸಿ 1996ರಲ್ಲಿ CRPE – ಕೇಂದ್ರಿಯ ಮೀಸಲು ಪೊಲೀಸ್ ಪಡೆಗೆ ಕಾನ್ಸ್ ಟೇಬಲ್ ಆಗಿ ಆಯ್ಕೆಗೊಂಡಿದ್ದ. ಕೆಲ ವರ್ಷಗಳ ಸೇವೆಯ ಬಳಿಕ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲೂ ಕರ್ತವ್ಯ ನಿರ್ವಹಿಸಿದ್ದ. ಅವನಿಗಿರುವ ಸಾಮರ್ಥ್ಯಕ್ಕೆ ಇವತ್ತು ಒಳ್ಳೆಯ ಹುದ್ದೆಯೊಂದನ್ನು ಆಲಂಕರಿಸುತ್ತಿದ್ದ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲೇ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದ. ಬಳಿಕ ಪ್ರಕರಣ ದಾಖಲುಗೊಂಡು, ಪೊಲೀಸರ ತನಿಖೆ ಸಂದರ್ಭದಲ್ಲಿ ಉಮೇಶ್ ರೆಡ್ಡಿ ಆರೋಪಿ ಅನ್ನುವುದು ಗೊತ್ತಾಗಿತ್ತು. ನಂತರ ಆತನನ್ನು ಪೊಲೀಸ್ ಸೇವೆಯಿಂದ ಮುಕ್ತಿಗೊಳಿಸಲಾಗಿತ್ತು. ಇದೇ ಪ್ರಕರಣದಲ್ಲಿ ವಿಚಾರಣೆ ನಡೆಸಿದಾಗ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ನಡೆದ ಪ್ರಕರಣಗಳಲ್ಲಿ ಉಮೇಶ್ ರೆಡ್ಡಿ ಆರೋಪಿ ಅನ್ನುವುದು ಗೊತ್ತಾಗಿತ್ತು.
ಈ ನಡುವೆ 1997ರ ಮಾರ್ಚ್ನಲ್ಲಿ ಬಳ್ಳಾರಿ ಜೈಲಿಗೆ ಉಮೇಶ್ ರೆಡ್ಡಿ ಸ್ಥಳಾಂತರಿಸುವಾಗ ಮೊದಲ ಬಾರಿಗೆ ಪೊಲೀಸರ ಕೈಯಿಂದ ಪರಾರಿಯಾಗಿದ್ದ. ಹೀಗೆ ಪರಾರಿಯಾದವನು ಮತ್ತೆ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ. ಹೀಗಾಗಿ 90ರ ದಶಕದಲ್ಲಿ ಉಮೇಶ್ ರೆಡ್ಡಿ ದೇಶ ನಡುಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮತ್ತೆ ಜುಲೈ ತಿಂಗಳಲ್ಲಿ ಉಮೇಶ್ ರೆಡ್ಡಿಯನ್ನು ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದರು. ಹೀಗೆ 6 ಬಾರಿ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಸಾಧಕ ಉಮೇಶ್ ರೆಡ್ಡಿ. ಪ್ರತಿ ಸಲ ತಪ್ಪಿಸಿಕೊಂಡಗ್ಲೂ ಮತ್ತೆ ಅತ್ಯಾಚಾರ ಮಾಡದೆ ಬಿಡುತ್ತಿರಲಿಲ್ಲ. ಹೀಗಾಗಿ ಈತನ ಮೇಲೆ ಬೆಂಗಳೂರಿನ ಪೀಣ್ಯ , ಗಂಗಮ್ಮನಗುಡಿ, ಜಾಲಹಳ್ಳಿ, ಯಶವಂತಪುರ ಠಾಣೆಗಳಲ್ಲೂ ಪ್ರಕರಣ ದಾಖಲಾಗುವಂತಾಯ್ತು. ಮಾತ್ರವಲ್ಲದೆ ಮುಂಬೈ, ಅಹಮದಾಬಾದ್, ಬರೋಡಾ, ಪುಣೆಗಳಲ್ಲೂ ಈತ ತನ್ನ ವಿಕೃತಿ ಮೆರೆದಿದ್ದ.
Discussion about this post