ಬೆಂಗಳೂರು : ಕೊರೋನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ಹಾಗೂ ಅವರಿಗೆ ಸಾಂತ್ವಾನ ಅನ್ನುವಂತೆ 1 ಲಕ್ಷ ರೂಪಾಯಿಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಘೋಷಣೆ ಮಾಡಿರುವ ಸಿಎಂ ಯಡಿಯೂರಪ್ಪ ಈ ಯೋಜನೆ ಬಿಪಿಎಲ್ ಕುಟುಂಬಕ್ಕೆ ಮಾತ್ರ ಅನ್ವಯ ಅಂದಿದ್ದಾರೆ. ಇನ್ನು ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ಬಲಿಯಾದರೂ ಕೇವಲ 1 ಲಕ್ಷ ಪರಿಹಾರ ಮಾತ್ರ ಸಿಗಲಿದೆ.
ಇನ್ನು 30 ರಿಂದ 50 ವರ್ಷದೊಳಗಿನ ದುಡಿಯುವ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿಯಾಗಿರಬೇಕು. 30ಕ್ಕಿಂತ ಕೆಳಗಡೆ ಹಾಗೂ 50 ವಯಸ್ಸಿಗಿಂತ ಮೇಲ್ಗಡೆಯ ವ್ಯಕ್ತಿಗಳು ಮೃತಪಟ್ಟರೆ ಈ ಯೋಜನೆ ಪ್ರಕಾರ ಹಣ ಪಡೆಯಲು ಸಾಧ್ಯವಿಲ್ಲ.
ಪ್ರಸ್ತುತ 20 ರಿಂದ 30 ಸಾವಿರ ಕುಟುಂಬಗಳಿಗೆ ಇದರ ಲಾಭ ಸಿಗುವ ಸಾಧ್ಯತೆ ಇದೆ. ಯೋಜನೆ ಚೆನ್ನಾಗಿದೆ. ಆದರೆ ವಯಸ್ಸಿನ ನಿಬಂಧನೆ ವಿಧಿಸಿರುವುದು ಮೂರ್ಖತನವೇ ಸರಿ. ಅದೆಷ್ಟು ಕುಟುಂಬಗಳನ್ನು 50 ವರ್ಷ ಮೇಲ್ಪಟ್ಟವರು ಸಾಕುತ್ತಿಲ್ಲ. ಯಡಿಯೂರಪ್ಪ ಅವರ ಈ ಆದೇಶ ನೋಡಿದರೆ 50 ವರ್ಷ ಮೇಲ್ಪಟ್ಟವರಿಗೆ ಬೆಲೆ ಇಲ್ವಾ
Discussion about this post