ರಾಜ್ಯ ರಾಜಕೀಯ ನಾಟಕದದ ಬಳಿಕವೂ ಮತದಾರರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ. ಸೋಮವಾರ ಸದನದಲ್ಲಿ ವಿಶ್ವಾಸ ಮತ ಸಾಬೀತು ಮಾಡಬೇಕಾಗಿದ್ದ ಸಿಎಂ ಕುಮಾರಸ್ವಾಮಿ ಒಂದು ದಿನದ ಮಟ್ಟಿಗೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.
ಹೇಗಾದರೂ ಸರಿ ಸದನವನ್ನು
ಮಂಗಳವಾರಕ್ಕೆ ಮುಂದೂಡಲೇಬೇಕು ಎಂದು ನಿರ್ಧರಿಸಿದ್ದ ಮೈತ್ರಿ ಶಾಸಕರು, ರಾತ್ರಿ 10.30
ಕಳೆಯುತ್ತಿದ್ದಂತೆ ಪ್ರತಿಭಟನೆ ಪ್ರಾರಂಭಿಸಿದ್ದರು. ಸುಗಮ ಕಲಾಪಕ್ಕೆ ಅಡ್ಡಿ ಪಡಿಸಿದ್ದ ಆಡಳಿತ
ಪಕ್ಷದ ಸದಸ್ಯರು ಸ್ಪೀಕರ್ ಮೇಲೆ ಒತ್ತಡ ತರಲಾರಂಭಿಸಿದ್ದರು.
ಇದಕ್ಕಾಗಿ ಹಸಿವಾಗುತ್ತಿದೆ, ದಯವಿಟ್ಟು ಸದನವನ್ನು ನಾಳೆ ಮುಂದೂಡಿ ಎಂದು ಕೆಲವರು ಆಗ್ರಹಿಸಿದರೆ, ಮತ್ತೆ ಕೆಲವರು ಶುಗರ್ ಇದೆ ಅನ್ನುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸಿದರು.
ಹಸಿವು ತಡೆಯಲಾರದ, ಶುಗರ್ ಇರೋ ಮಂದಿಗೆ ದಯವಿಟ್ಟು ಮತ ನೀಡಬೇಡಿ 1
ಜನಪ್ರತಿನಿಧಿಗಳಾದವರು ಜನರಿಗಾಗಿ ಇರಬೇಕು ತಾನೇ, ರಾಜ್ಯದ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಒಂದು ಕಡೆ ಅತೀ ವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿ ಜನ ಸಂಕಷ್ಟದಲ್ಲಿದ್ದಾರೆ. ಈ ಸಂದರ್ಭದಲ್ಲಿ ಓಟು ಕೊಟ್ಟ ಮಂದಿಗೆ ಸಹಾಯ ಮಾಡಬೇಕಾದ ಮಂದಿ ಸದನದಲ್ಲಿ ಸ್ವ ಪ್ರತಿಷ್ಟೆಗೆ ನಿಂತಿದ್ದರು.
ಹಸಿವು ತಡೆಯಲಾರದ, ಶುಗರ್ ಇರೋ ಮಂದಿಗೆ ದಯವಿಟ್ಟು ಮತ ನೀಡಬೇಡಿ 2
ಈ ನಾಟಕ ಮುಗಿದರೆ ಸಾಕು ಎಂದು ಜನ ಬಯಸುತ್ತಿದ್ದಾರೆ, ಜನಪ್ರತಿನಿಧಿಗಳೂ ಅದನ್ನೇ ಬಯಸಬೇಕಾಗಿತ್ತು. ಆದರೆ ಅವೆಲ್ಲವನ್ನೂ ಬದಿಗೊತ್ತಿ ಹಸಿವಾಗುತ್ತಿದೆ, ಸಕ್ಕರೆ ಕಾಯಿಲೆ ಇದೆ ಅನ್ನಲಾರಂಭಿಸಿದ್ದು ಯಾವ ನ್ಯಾಯ. ಕ್ಷೇತ್ರದ ಜನ ಹಸಿವಿನಿಂದ ನರಳುತ್ತಿದ್ದಾರೆ,ಅವರಿಗೂ ಕಾಯಿಲೆಗಳಿದೆ.
ಹಸಿವು ತಡೆಯಲಾರದ, ಶುಗರ್ ಇರೋ ಮಂದಿಗೆ ದಯವಿಟ್ಟು ಮತ ನೀಡಬೇಡಿ 3
ಹೀಗಾಗಿ ಮುಂದಿನ ಚುನಾವಣೆ
ಓಟು ಕೇಳಲು ಬಂದಾಗ ಅವರಿಗಿರುವ ಕಾಯಿಲೆಗಳನ್ನು ಮೊದಲು ತಿಳಿದುಕೊಳ್ಳಬೇಕು, ಕಾಯಿಲೆಗಳು ಇಲ್ಲದ
ಸೂಕ್ತ ಅಭ್ಯರ್ಥಿಯನ್ನು ಸದನಕ್ಕೆ ಕಳುಹಿಸಬೇಕು,ಒಂದು ದಿನ ಹಸಿವನ್ನು ತಡೆದುಕೊಳ್ಳಬಲ್ಲವರನ್ನು
ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು.
ಕಳೆದ ಶುಕ್ರವಾರವೂ ಇದೇ ನಾಟಕ ನಡೆದಿತ್ತು, ತಡವಾಗುತ್ತಿದೆ ಕ್ಷೇತ್ರಕ್ಕೆ ಹೋಗಬೇಕು, ಜನ ಕಾಯುತ್ತಿದ್ದಾರೆ ಎಂದು ಹೇಳಿದ ಶಾಸಕರ ಪೈಕಿ ಅನೇಕರು ತೆರಳಿದ್ದು ರೆಸಾರ್ಟ್ ಗೆ ಅನ್ನುವುದನ್ನು ಮರೆಯುವಂತಿಲ್ಲ.
Discussion about this post