ಮಂಗಳೂರು : ಕನ್ನಡ ಕೋಗಿಲೆ ಕಾರ್ಯಕ್ರಮದ ಮೂಲಕ ಕನ್ನಡಿಗರ ಮನ ಗೆದ್ದ ಅಖಿಲಾ ಪಜಿಮಣ್ಣು ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಕೋಗಿಲೆಯಂತಹ ಕಂಠ ಸಿರಿಯ ಮೂಲಕ , ಹಾಡುಗಾರಿಕೆಯ ಮೂಲಕ ಎಲ್ಲರ ಮನೆ ಮಾತಾದ ಅಖಿಲಾ ಪಜಿಮಣ್ಣು ಧನಂಜಯ್ ಶರ್ಮಾ ಅವರೊಂದಿಗೆ ಅಖಿಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಎಂಗೇಜ್ ಆಗಿರೋ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಧನಂಜಯ್ ಶರ್ಮಾ ಡಿಸ್ನಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಉನ್ನತ ಹುದ್ದೆಯೊಂದರಲ್ಲಿದ್ದಾರೆ ಎಂದು ಗೊತ್ತಾಗಿದೆ.

ಕನ್ನಡ ಕೋಗಿಲೆಯ ಬಳಿಕ ಫೆಬ್ರವರಿ 1 ರಿಂದ ನಿರೂಪಕಿಯಾಗಿ ಕಲರ್ಸ್ ಕನ್ನಡದಲ್ಲಿ ಕಾಣಿಸಿಕೊಂಡಿರುವ ಅಖಿಲಾ ಮುಂಜಾನೆ ರಾಗ ಅನ್ನೋ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಮುಂಜಾನೆ ರಾಗ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಗ್ಗೆ ದಿನಕ್ಕೊಂದು ದೇವಸ್ಥಾನ ದರ್ಶನದ ಜೊತೆಗೆ ಅಖಿಲಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ದೇವಸ್ಥಾನಗಳ ಸುತ್ತ ಮುತ್ತಲ ಪರಿಸರ ಮತ್ತು ಅಲ್ಲಿನ ಆಹಾರ ವ್ಯವಹಾರ, ಆ ಸ್ಥಳಗಳ ಹಿನ್ನಲೆ , ಚರಿತ್ರೆ , ಖ್ಯಾತಿಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗುವುದು. ಜೊತೆಗೆ ವಿದ್ಯಾಭೂಷಣ ಮತ್ತು ಅನನ್ಯ ಭಟ್ , ಸಂಗೀತಾ ಕಟ್ಟಿ ಮತ್ತು ಇನ್ನೂ ಹಲವು ಗಾಯಕರು ಹಾಡಿರುವ ಭಕ್ತಿ ಪ್ರಧಾನ ಗೀತೆಗಳನ್ನು ಪ್ರಸಾರ ಮಾಡಲಾಗುತ್ತದೆ.