ಬೆಂಗಳೂರು : ಬ್ಯಾಂಗ್ ಸಿನಿಮಾ ಶೂಟಿಂಗ್ ವೇಳೆ ಸೆಟ್ ನಲ್ಲಿ ಜಾರಿ ಬಿದ್ದಿರುವ ನಟಿ ಶಾನ್ವಿ ಗಾಯಮಾಡಿಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.

ಬ್ಯಾಂಗ್ ಚಿತ್ರದಲ್ಲಿ ಶಾನ್ವಿ ಗ್ಯಾಂಗ್ ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದ Action ದೃಶ್ಯ ಶೂಟಿಂಗ್ ನಡೆಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಳೆಯ ಎಫೆಕ್ಟ್ ನಲ್ಲಿ ಶೂಟಿಂಗ್ ನಡೆಯುವ ವೇಳೆ ಕಾಲು ಜಾರಿ ಬಿದ್ದು ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ.

ಶಾನ್ವಿಯವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಚಿತ್ರತಂಡ ಹೇಳಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಬ್ಯಾಂಗ್ ಚಿತ್ರಕ್ಕೆ ಶ್ರೀಗಣೇಶ್ ಪರಶುರಾಮ್ ನಿರ್ದೇಶನ ಮಾಡುತ್ತಿದ್ದು, ಸ್ಟಂಟ್ ಮಾಸ್ಟರ್ ಗಣೇಶ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
Discussion about this post