Monday, March 8, 2021

ಯೋಧರ ಸಾವಿನ ನೋವಿನ ನಡುವೆ ನಿಮ್ಮದೇನು ರಾಜಕೀಯ ಜಗ್ಗೇಶ್

Must read

- Advertisement -
- Advertisement -

ಗುರುವಾರ ಜಮ್ಮು ಕಾಶ್ಮಿರದ ಪುಲ್ವಾಮದಲ್ಲಿ ಉಗ್ರರ ರಣಕೇಕೆಗೆ ಭಾರತೀಯರು ಕಣ್ಣೀರಿಡುತ್ತಿದ್ದಾರೆ. ಈ ನಡುವೆ ಕೆಲ ರಾಜಕೀಯ ಪಕ್ಷಗಳ ನಾಯಕರು ತಮ್ಮದೆಲ್ಲಿ ಇಡೋಣ ಎಂದು ಮುಂದೆ ಬಂದಿದ್ದಾರೆ.

ಅದರಲ್ಲಿ ಚಂದನವನದ ನಟ ಜಗ್ಗೇಶ್ ಕೂಡಾ ಸೇರಿದ್ದಾರೆ ಅನ್ನುವುದು ದುರಂತ.

ಹುತಾತ್ಮ ಯೋಧರಿಗೆ ಗೌರವ,ನಮನ ಸಲ್ಲಿಸಬೇಕಾದ ಜಗ್ಗೇಶ್, ಟ್ವೀಟ್ ನಲ್ಲಿ ರಾಜಕೀಯ ಹೇಳಿಕೆ ತೇಲಿ ಬಿಟ್ಟಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆ ವ್ಯಕ್ತವಾಗಿದೆ.

ಜಮ್ಮು ಕಾಶ್ಮಿರದ ಪುಲ್ವಾಮ ಉಗ್ರರ ದಾಳಿ ಪ್ರಧಾನವಾಗಿಟ್ಟುಕೊಂಡು ಟ್ವಿಟ್ ಮಾಡಿರುವ ನಟ ಜಗ್ಗೇಶ್​, ಭಾರತೀಯರೆ ನಾವು 2019ರಲ್ಲಿ ಎಚ್ಚರ ತಪ್ಪಿ ಸ್ವಾರ್ಥಿಗಳ ನಾಟಕ ನಂಬಿ, ನತದೃಷ್ಟರಿಗೆ ದೇಶ ಅರ್ಪಿಸಿದರೆ ಇಂಥ ಅನಾಹುತಗಳು ದೇಶವ್ಯಾಪಿ ಮುಂದುವರೆಯುತ್ತದೆ.ಎಚ್ಚರ’! ಎಂದು ಬರೆದುಕೊಂಡಿದ್ದಾರೆ.

ಜಗ್ಗೇಶ್ ಟ್ವೀಟ್ ಕಂಡ ಮಂದಿ  ‘ಏನ್ ಸರ್ ನೋವಿನಲ್ಲೂ ರಾಜಕೀಯ ಬೇಕಿತ್ತಾ, ಈ ದೇಶಕ್ಕೆ ಯಾರು ಬೇಕು ಬೇಡ ಇದನ್ನು ಆಮೇಲೆ ಯೋಚಿಸೋಣ. ಇದು ಯೋಧರ ಕುಟುಂಬದ ನೋವಿನಲ್ಲಿ ಭಾಗಿಯಗೋ ಸಮಯ ಅಂದಿದ್ದಾರೆ.

ಮತ್ತೊಬ್ಬರು ‘ತುಂಬಾ ಹೀನಾಯವಾದ ಮನೋಭಾವ ನಿಮ್ಮದು. ಇಂತಹ ಯಾತನಮಯವಾದ ಕ್ಷಣದಲ್ಲಿ ಚುನಾವಣೆಯ ಬಗ್ಗೆ ಚಿಂತಿಸುವ ನಿಮ್ಮಂತಹ ಜನರಿಂದ ದೇಶ ಉದ್ಧಾರವಾದಂತೆ ಅಂದಿದ್ದಾರೆ.

https://twitter.com/PaperSimha/status/1096298602060804097

ಜಗ್ಗೇಶ್ ಅವರೇ ನೀವು ಅದ್ಭುತ ನಟರು, ಜೊತೆಗೆ ರಾಜಕಾರಣಿಗಳು. ಹೀಗಾಗಿ ರಾಜಕೀಯ ಮಾಡುವುದನ್ನು ಬಿಟ್ಟು ಬಿಡುವುದು ಸಾಧ್ಯ. ಹಾಗಂತ ಯಾವಾಗ ರಾಜಕೀಯ ಮಾಡಬೇಕು ಅನ್ನುವುದನ್ನು ಅರ್ಥ ಮಾಡಿಕೊಳ್ಳಿ ಸಾಕು.

- Advertisement -
- Advertisement -
- Advertisement -

Latest article